ಧಾರವಾಡ: ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದ ಡಿಸಿಎಂ
1 min readಧಾರವಾಡ: ಕರ್ನಾಟಕ ಸರಕಾರದ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಕೌಶಾಲ್ಯಾಭಿವೃದ್ಧಿ, ಉಧ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಚಿವ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಇಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನ ಆಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿವಿಯ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಡಿಸಿಎಂ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಸಮಸ್ಯಗಳ ಕುಂದು ಕೊರತೆಗಳನ್ನು ಗಮನಕ್ಕೆ ತಂದು, ಅವುಗಳನ್ನ ಈಡೇರಿಸುವಂತೆ ಕೇಳಿಕೊಂಡರು.
ಸಂಶೋಧನಾ ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳನ್ನು ಸಂಘದ ಅಧ್ಯಕ್ಷ ಅಮಿತ್ ಶಿಂಧೆ ಮೌಖಿಕವಾಗಿ ಪ್ರಸ್ತುತ ಪಡಿಸಿದರು. ತದ ನಂತರ ಸಂಘದ ಗೌರವಾಧ್ಯಕ್ಷ ಮಂಜು ಹೊಂಗಲದ ಕಾರ್ಯದರ್ಶಿ ಮಲ್ಲೇಶ ಚನ್ನಬತ್ತಿ ಹಾಗೂ ರವಿ ಹೆಬಸೂರ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಸೇರಿ ಮನವಿ ಪತ್ರವನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ ನಾರಾಯಣ್ ಕೂಡಲೇ ಈ ಕುರಿತು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.