Posts Slider

Karnataka Voice

Latest Kannada News

ಧಾರವಾಡ ಎಸ್ಪಿಯಾಗಿ ಪಿ.ಕೃಷ್ಣಕಾಂತ ಅಧಿಕಾರ ಸ್ವೀಕಾರ: ವರ್ತಿಕಾ ಕಟಿಯಾರ ನಿರ್ಗಮನ

1 min read
Spread the love

ಧಾರವಾಡ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹುಬ್ಬಳ್ಳಿ-ಧಾರವಾಡ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿದ್ದ ಪಿ.ಕೃಷ್ಣಕಾಂತ ಇಂದು ಅಧಿಕಾರ ಸ್ವೀಕರಿಸಿದರು.

ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವರ್ತಿಕಾ ಕಟಿಯಾರ್ ಜಾಗಕ್ಕೆ ಪಿ.ಕೃಷ್ಣಕಾಂತ ಅವರನ್ನ ವರ್ಗಾವಣೆ ಮಾಡಿ, ಸರಕಾರ ಆದೇಶ ಹೊರಡಿಸಿತ್ತು. ಇಂದು ವರ್ತಿಕಾ ಕಟಿಯಾರ್ ಅವರು ಪಿ.ಕೃಷ್ಣಕಾಂತರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಹಿಂದೆ ಮೂರೇ ತಿಂಗಳಲ್ಲಿ ಧಾರವಾಡ ಜಿಲ್ಲೆಯಿಂದ ವರ್ಗಾವಣೆಯಾಗಿದ್ದ ವರ್ತಿಕಾ ಕಟಿಯಾರ್, ಕಾನೂನಾತ್ಮಕವಾಗಿ ಹೋರಾಟ ಮಾಡಿ, ಧಾರವಾಡದಲ್ಲೇ ಮುಂದುವರೆದಿದ್ದರು.

ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ಕೃಷ್ಣಕಾಂತ ಅವರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೆ, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed