ಪ್ರೂಟ್ ಇರ್ಪಾನ್ ಕೊಲೆ ಪ್ರಕರಣ: ಹಿಂದೆ ಬಂದು ಶೂಟ್ ಮಾಡಿದ್ದವನ ಬಂಧನ

ಹುಬ್ಬಳ್ಳಿ: ಆಗಸ್ಟ್ 6 ರಂದು ಹಳೇಹುಬ್ಬಳ್ಳಿ ಅರವಿಂದನಗರದ ಹೊಟೇಲ್ ಬಳಿ ನಡೆದಿದ್ದ ಹಾಡುಹಗಲೇ ಶೂಟೌಟ್ ಪ್ರಕರಣದಲ್ಲಿ ಪ್ರಮುಖವಾಗಿದ್ದ ಆರೋಪಿಯನ್ನ ಪತ್ತೆ ಮಾಡುವಲ್ಲಿ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ತಂಡ ಯಶಸ್ವಿಯಾಗಿದ್ದು, ಬಾಂಬೆಯಿಂದ ಆರೋಪಿಯನ್ನ ಕರೆತರಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಧಾರವಾಡದ ರೌಡಿ ಷೀಟರ್ ಇರ್ಪಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನನ್ನ ಹಲವರು ಕೂಡಿಕೊಂಡು ಬೈಕಿನಲ್ಲಿ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಹಿಂಬದಿಯಿಂದ ಬಂದು ಗುಂಡು ಹಾರಿಸಿ, ಪರಾರಿಯಾಗಿದ್ದ ಯುವಕನ ಪತ್ತೆಗಾಗಿ ನಿರಂತರವಾಗಿ ಜಾಲ ಬೀಸಲಾಗಿತ್ತು.
ಬಾಂಬೆಯಲ್ಲಿ ತಲೆಮರೆಸಿಕೊಂಡಿದ್ದ ಅಂಕೂರಸಿಂಗ್ ಅಲಿಯಾಸ್ ಗೋಲು ಎಂಬಾತನನ್ನ ಬಂಧನ ಮಾಡುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ 11ಕ್ಕೂ ಹೆಚ್ಚು ಜನರನ್ನ ಬಂಧನ ಮಾಡಲಾಗಿದೆ.
ಇದೇ ಘಟನೆಯಲ್ಲಿ ಬಾಂಬೆ ಮೂಲದ ಗ್ಯಾಂಗಸ್ಟರನನ್ನ ಕರೆದುಕೊಂಡು ಬಂದು ಮೂರು ದಿನ ವಿಚಾರಣೆಯನ್ನು ಪೊಲೀಸ್ ಇನ್ಸಪೆಕ್ಟರ್ ಶಿವಾನಂದ ಕಮತಗಿ ನಡೆಸಿದ್ದರು. ಇದೀಗ ಶೂಟ್ ಮಾಡಿದ ಎಲ್ಲರೂ ಸಿಕ್ಕಂತಾಗಿದ್ದು, ಹಳೇಹುಬ್ಬಳ್ಳಿ ಠಾಣೆ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ.