ಗುಳೇದಕೊಪ್ಪದ ಕಾರಿನಿಂದ ಹುನಶಿಕಟ್ಟಿ ವ್ಯಕ್ತಿಯ ದುರ್ಮರಣ
1 min readಧಾರವಾಡ: ಪೋರ್ಡ್ ಕಾರು ವೇಗವಾಗಿ ಚಲಾಯಿಸಿ ಟಾಟಾ ಮ್ಯಾಜಿಕ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿ, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ನವಲಡಿ ಗ್ರಾಮದ ಬಳಿ ಸಂಭವಿಸಿದೆ.
ಗದಗ ಕಡೆಯಿಂದ ಬರುತ್ತಿದ್ದ ಕಾರಿನ ಚಾಲಕ ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮದ ಶಿವಲಿಂಗ ವೀರಪ್ಪಹಡಪದ ಎಂಬಾತನೇ ನಿರ್ಲಕ್ಷ್ಯವಹಿಸಿ ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ನರಗುಂದ ತಾಲೂಕಿನ ಪಡಿಯಪ್ಪ ತಳವಾರ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಆರೋಪಿಯಾಗಿರುವ ಶಿವಲಿಂಗ ವೀರಪ್ಪ ಹಡಪದ ಹಾಗೂ ಪ್ರಭಾಕರ ಸಣ್ಣಬಾಳ ಎಂಬಾತನಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಣ್ಣಿಗೇರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಶಿವಲಿಂಗನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತದಲ್ಲಿ ಎರಡು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.