Posts Slider

Karnataka Voice

Latest Kannada News

ಪುರುಷಾರ್ಥಕ್ಕಾಗಿ ಸಾವಿತ್ರಿಭಾಯಿ ಫುಲೆ ಜಯಂತಿ ಆಚರಣೆ: ಶಿಕ್ಷಕಿಯರನ್ನೇ ಕಡೆಗಣಿಸುವ ಸರಕಾರಿ ಶಿಕ್ಷಕರ ಸಂಘಗಳು

1 min read
Spread the love

ಧಾರವಾಡ: ಅಕ್ಷರ ಕ್ರಾಂತಿಯನ್ನ ಮಾಡಿದ ರಾಷ್ಟ್ರದ ಮೊದಲ ಶಿಕ್ಷಕಿ ಸಾವಿತ್ರಿಭಾಯಿ ಫುಲೆಯವರ ಜನ್ಮ ದಿನಾಚರಣೆಯನ್ನ ಸರಕಾರಿ ಶಿಕ್ಷಕರ ಸಂಘಗಳು ತಮ್ಮ ಪುರುಷಾರ್ಥಕ್ಕೆ ಆಚರಿಸಿಕೊಳ್ಳುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಾರಣವಾಗಿದ್ದು, ಮಹಿಳಾ ಶಿಕ್ಷಕಿಯರನ್ನ ಸಂಪೂರ್ಣವಾಗಿ ಕಡೆಗಣನೆ ಮಾಡಿರುವುದು.

ಹೌದು.. ಶಿಕ್ಷಕರ ಚುನಾವಣೆಗಳು ಮುಗಿದು ನಂತರ ಪದಾಧಿಕಾರಿಗಳ ಆಯ್ಕೆಯೂ ಮುಗಿದು ಹೋಗಿದೆ. ಆದರೆ, ಶಿಕ್ಷಕರಲ್ಲಿ ಶೇಕಡಾ ಅಂಕಿ ಅಂಶದಲ್ಲಿ ಶಿಕ್ಷಕರಿಗಿಂತ ಹೆಚ್ಚು ಶಿಕ್ಷಕಿಯರು ಇರುವುದು ಎಲ್ಲರಿಗೂ ಗೊತ್ತೆಯಿದೆ. ಆದರೆ, ಯಾವುದೇ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಅಧ್ಯಕ್ಷ ಸ್ಥಾನವನ್ನ ನೀಡದೇ, ಇದು ಕೇವಲ ಮಾತಾಡಲ್ಲಷ್ಟೇ ಎಂಬುದನ್ನ ಶಿಕ್ಷಕ ಸಂಘಗಳು ನಡೆದುಕೊಂಡಿವೆ ಎಂದು ಹೇಳಲಾಗುತ್ತಿದೆ.

ಜ್ಞಾನವಂತರೆನಿಸಿಕೊಂಡ ಶಿಕ್ಷಕ ವಲಯದಲ್ಲಿಯೂ ಮಹಿಳಾ ಶಿಕ್ಷಕಿಯರನ್ನ ಸಂಪೂರ್ಣವಾಗಿ ಕಡೆಗಣನೆ ಮಾಡುತ್ತಲೇ ಬರಲಾಗುತ್ತಿದೆ. ಆದರೂ, ಸಾವಿತ್ರಿಭಾಯಿ ಫುಲೆಯವರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ, ಇದು ಯಾವ ನ್ಯಾಯ. ನಿಮ್ಮ ಮನಸ್ಸನ್ನ ಒಂದೇ ಒಂದು ಸಲ ಕೇಳಿ ನೋಡಿ, ನೀವು ಮಾಡುತ್ತಿರುವುದು ಪುರುಷಾರ್ಥವಷ್ಟೇ ಎಂದೆನಿಸದೇ ಇರದು ಅಂತಾರೆ ಪ್ರಜ್ಞಾವಂತರು.

ಈ ನಡುವೆ ಫುಲೆಯವರ ಜಯಂತಿಯನ್ನ ಸರಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡುವಂತೆ ಗ್ರಾಮೀಣ ಸಂಘ ಮುಖ್ಯಮಂತ್ರಿಗಳನ್ನ ಒತ್ತಾಯಿಸಿದೆ.

ಮನವಿ ಪತ್ರ ಇಲ್ಲಿದೆ..

ವಿಷಯ: ಸಾವಿತ್ರಿ ಬಾಯಿ ಫುಲೆಯವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸುವ ಕುರಿತು  ಮುಖ್ಯ ಮಂತ್ರಿಗಳಿಗೆ ಗ್ರಾಮೀಣ ಶಿಕ್ಷಕರ ಸಂಘದ ಆಗ್ರಹ.

ಮಾನ್ಯರೆ

ಮೇಲ್ಕಾಣಿಸಿದ ವಿಷಯದನ್ವಯ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿಯ ಎಲ್ಲ ಪದಾಧಿಕಾರಿಗಳು ಹಾಗೂ ನಾಡಿನ ಸಮಸ್ತ ಗುರುಬಳಗದ ವತಿಯಿಂದ ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುವುದೇನೆಂದರೆ.. ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಕ್ರಾಂತಿ ಜ್ಯೋತಿ ಅಕ್ಷರ ಅವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜಯಂತಿಯನ್ನು ಜನೇವರಿ ಮೂರರಂದು ಎಲ್ಲ ಶಾಲೆಗಳನ್ನು ಆಚರಿಸಬೇಕೆಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಮನವಿಯ ಮೇರೆಗೆ  ಮಾನ್ಯ ಶಿಕ್ಷಣ ಸಚಿವರ ಸಿಫಾರಸ್ಸಿನ ಮೇರೆಗೆ ಸರಕಾರದ ಆದೇಶವಾಗಿರುವುದನ್ನು ಸ್ವಾಗತಿಸುತ್ತೇವೆ .ಈ ದಿಸೆಯಲ್ಲಿ ಪ್ರತಿವರ್ಷವೂ ಮಾತೆ ಫುಲೆಯವರ ಜಯಂತಿಯನ್ನು ನಾಡಿನಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಜಿಲ್ಲಾಡಳಿತದ ಅಧೀನದಲ್ಲಿ ನಡೆಸುವಂತೆ ಆದೇಶ ಮಾಡಿ ಸಾಮಾಜಿಕ ಜಾಗೃತಿ ಮಹಿಳಾ ಸಬಲೀಕರಣ ಲಿಂಗ ಸಮಾನತೆ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದ ವೀರ ವನಿತೆ ಮಹಾನ ಮಾತೆ  ದೀನ ದಲಿತರ ಏಳಿಗೆಗಾಗಿ ಜೀವನವನ್ನೆ ಮುಡುಪಾಗಿರಿಸಿದ ಮಾತೆ ಸಾವಿತ್ರಿ ಬಾಯಿ ಫುಲೆಯವರ ಜಯಂತಿಯನ್ನು ಪ್ರತಿ ವರ್ಷ ಜನೇವರಿ ಮೂರರಂದು ಸರ್ಕಾರಿ ಕಾರ್ಯಕ್ರಮವಾಗಿ ರಜೆ ರಹಿತ್ವಾಗಿ ಆದೇಶ ಹೊರಡಿಸಬೇಕೆಂದು ಈ ಮೂಲಕ ರಾಜ್ಯದ ಮುಖ್ಯ ಮಂತ್ರಿಗಳವರಿಗೆ ಶಿಕ್ಷಣ ಸಚಿವರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ರಾಜ್ಯಾಧ್ಯಕ್ಷ ಅಶೋಕ ಎಂಸಜ್ಜನ, ಗೌರವ ಸಲಹೆಗಾರ ನಾಡೋಜ ಮಹೇಶ ಜೋಶಿ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ, ಮಹಾಪೋಷಕ ಪವಾಡೆಪ್ಪ, ಮಹಿಳಾ ಪದಾಧಿಕಾರಿಗಳಾದ ಕುಸುಮಾ, ಲಕ್ಷ್ಮಿದೇವಮ್ಮ, ಅಕ್ಕಮಹಾದೇವಿ, ರಾಜಶ್ರೀ, ಶಿವಲೀಲಾ, ವಿಜಯಲಕ್ಷ್ಮಿ,  ರೇಖಾದೇವಿ, ರೋಜಿ, ಜಾಜಿ, ಸುಧಾ, ಕಮಲಾಕ್ಷಿ, ಹನುಮಂತಪ್ಪ ಮೇಟಿ, ಎಂ.ಐ.ಮುನವಳ್ಳಿ, ಶರಣಬಸವ ಬನ್ನಿಗೋಳ ಆಗ್ರಹಿಸುತ್ತಿದ್ದೇವೆ.


Spread the love

Leave a Reply

Your email address will not be published. Required fields are marked *