ಮಾರಡಗಿಯಲ್ಲಿ ಶಾಲೆ ಆರಂಭ ಹೇಗಿತ್ತು.. ನೀವೂ ನೋಡಿ.. ಮನಸ್ಸಿಗೆ ನೆಮ್ಮದಿ ಮೂಡಿಸತ್ತೆ..
1 min readಧಾರವಾಡ: ತಾಲೂಕಿನ ಮಾರಡಗಿ ಗ್ರಾಮದ ಶ್ರೀಮತಿ ಗಿರಿಜಮ್ಮ ಗಂಗಾಧರ ಬಳ್ಳಾರಿ ಸರಕಾರಿ ಪ್ರೌಢ ಶಾಲೆಯಲ್ಲಿಯಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನ ಸರಕಾರದ ಸೂಚನೆಯ ಅನುಸಾರ ಕ್ರಮವನ್ನ ತೆಗೆದುಕೊಂಡು ಆರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸಿದ್ದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವ್ಹಿ.ಪಿ.ಜಾಕೋಜಿ ಮುಂದಾಳತ್ವದಲ್ಲಿ ಮೊದಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಾಕ್ಸಗಳನ್ನ ಹಾಕಲಾಗಿತ್ತು. ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ಅಂತರವನ್ನ ಕಾಯ್ದು ಶಾಲೆಯೊಳಗೆ ಗುಲಾಬಿ ಹೂ ನೀಡಿ, ಬರಮಾಡಿಕೊಳ್ಳಲಾಯಿತು.
ಪ್ರತಿಯೊಂದು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನ್ ಮಾಡಿ ಸ್ಯಾನಿಟೈಸ್ ಮಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿ ಶಾಲಾ ಪ್ರಾರಂಭೋತ್ಸವ ಅರ್ಥಪೂರ್ಣವಾಗಿ ಮಾಡಲಾಯಿತು. ಈ ಉತ್ಸವದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸೂಪರವೈಸರ್ ಹಂಜಿ, ರೋಹಿಣಿ ಚವಾಣ್, ಶಿಕ್ಷಕರಾದ ಸಾಯಿರಾಬಾನು ನದಾಫ್, ಈರಣ್ಣ ಅಂಗಡಿ, ಎಂ. ಎಸ್. ಜಮಾದಾರ, ಬಸವರಾಜ ಚಿಕ್ಕೂರ, ಚಂದ್ರಿಕಾ ನವಲೆ, ರೇಖಾ ಜೀರಗಾಳ ಮುಂತಾದವರು ಭಾಗವಹಿಸಿ ಶಾಲಾ ಆರಂಭಕ್ಕೆ ಕಾರಣೀಕರ್ತರಾದರು.