Posts Slider

Karnataka Voice

Latest Kannada News

ಹೋರಾಟ ಸಮಂಜಸವಲ್ಲ-ಬಂದ್ ಕೈ ಬಿಡಿ: ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ

1 min read
Spread the love

ಹುಬ್ಬಳ್ಳಿ: ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿದ ಬಂದ ಕೈಬಿಡಿ. ರಾಜ್ಯ ಸರ್ಕಾರ ಮರಾಠ ಸಮುದಾಯದವರಿಗೆ ಅಭಿವೃದ್ಧಿ ನಿಗಮ ರಚಿಸಿರುವುದನ್ನು ವಿರೋಧಿಸಿ ಇದೇ ದಿನಾಂಕ 5ರಂದು ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಕರೆ ನೀಡಿರುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ಹೇಳಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕದಲ್ಲಿ ಎಲ್ಲಾ ಸಮುದಾಯಗಳು ಸಹೋದರತೆ ಪ್ರೀತಿ ಶಾಂತಿಯಿಂದ ಸಹಬಾಳ್ವೆ ನಡೆಸುತ್ತಾ ಬಂದಿದ್ದು, ರಾಜ್ಯದಲ್ಲಿರುವ ಮರಾಠಿಗರು ಶತಶತಮಾನಗಳಿಂದ ನಮ್ಮೊಂದಿಗೆ ಹೊಂದಿಕೊಂಡು ನಾಡಿನ ನೆಲ ಜಲ ಬಗ್ಗೆ ಅಭಿಮಾನದಿಂದ ಇದ್ದಾರೆ. ಕೆಲವೊಂದಿಷ್ಟು ಜನ ಗಡಿಭಾಗದ ಮರಾಠಿ ಭಾಷಿಕರು ಕೆಲವು ಮರಾಠಿ ಸಂಘಟನೆಗಳು ಉದ್ಧಟತನ ಮೆರೆದಿದ್ದು, ಕನ್ನಡ  ವಿರೋಧಿ ಸಂಘಟನೆಗಳನ್ನು ಸಂಪೂರ್ಣವಾಗಿ ರಾಜ್ಯದಿಂದ ನಿಷೇಧ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

ಈ ಹಿಂದೆ ಮಹಾಮಾರಿ ಕೊರೋನಾ ರೋಗದಿಂದ ದೇಶದಲ್ಲೆಡೆ ಲಾಕ್ ಡೌನ್ ಆದಾಗಿನಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆರ್ಥಿಕವಾಗಿ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಬಂದ್ ಮಾಡಿ ಮತ್ತೆ ಗಾಯದ ಮೇಲೆ ಬರೆ ಎಳಿದಂತಾಗುವುದು. ಕನ್ನಡಪರ ಸಂಘಟನೆಗಳ ಬಗ್ಗೆ ನಮಗೆ ಅಪಾರವಾದ ಅಭಿಮಾನವಿದ್ದು ಗೌರವವಿದ್ದು ನಾಡು ನುಡಿ ವಿಷಯದಲ್ಲಿ ತಾವು ಕೆಲವೊಂದಿಷ್ಟು ಸಂದರ್ಭದಲ್ಲಿ ತೆಗೆದುಕೊಂಡು ನಿರ್ಧಾರ ಐತಿಹಾಸಿಕವಾಗಿದ್ದು ಎಂದಿದ್ದಾರೆ.

ಈಗ ಕರೆ ಕೊಟ್ಟಿರುವ ಬಂದ್ ವಾಪಸ್ ಮಾಡಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದು. ಸೂಕ್ತ ಕೆಲವು ಬಿಜೆಪಿ ಮುಖಂಡರು ಕನ್ನಡಪರ ಸಂಘಟನೆಗಳ ವಿರುದ್ಧ ದೂರು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಟ್ಟು ಸಾಮರಸ್ಯವನ್ನು ಹಾಳು ಮಾಡುವ ಕೆಲಸವನ್ನು ಬಿಟ್ಟು ಸ್ನೇಹ ಮತ್ತು ಪ್ರೀತಿಯಿಂದ ಎಲ್ಲರೂ ಒಟ್ಟಿಗೆ ಬಾಳುವ ಸಲಹೆ ಸೂಚನೆಗಳನ್ನು ನೀಡಿ ಬಂದಿರುವ ಸಮಸ್ಯೆ ಅತ್ಯಂತ ಸೂಕ್ಷ್ಮವಾಗಿದ್ದು ಕನ್ನಡಪರ ಸಂಘಟನೆಗಳ ನಾಯಕರಲ್ಲಿ ವಿನಂತಿ ಡಿಸೆಂಬರ್  5ರಂದು ನೀಡಿರುವ ಬಂದು ಕರೆಯನ್ನು ವಾಪಸ್ ಪಡೆಯಬೇಕೆಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *