‘ನನಗ್ಯಾರ ಭಯ’- ಕವಿ ಮನಸ್ಸಿನ ಇನ್ಸಪೆಕ್ಟರ್: ಪ್ರೂಟ್ ಹತ್ಯೆಯಾದಾಗ ಹಳೇಹುಬ್ಬಳ್ಳಿ, ವಕೀಲರ ಗಲಾಟೆಯಾದಾಗ ಎಪಿಎಂಸಿ ಠಾಣೆ
1 min readಹುಬ್ಬಳ್ಳಿ: ಅವಳಿನಗರದ ಸೈಬರ್ ಕ್ರೈಂ ಠಾಣೆಯ ಇನ್ಸಪೆಕ್ಟರ್ ಈ ವರ್ಷ ಬರೋಬ್ಬರಿ ಮೂರ್ನಾಲ್ಕು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಹಾಗಾಗಿದೆ. ಒಂದು ರೀತಿಯಲ್ಲಿ ಇವರ ಡ್ಯೂಟಿ ಲೋಕಲ್ ಭಾಷೆಯಲ್ಲಿ ಹೇಳುವಂತೆ ಅಲೆಮಾರಿಯಾಗಿದೆ. ಆದರೂ, ಅದೇ ಹಸನ್ಮುಖಿ ಭಾವದಿಂದ ಸರಕಾರದ ಕೆಲಸ ದೇವರ ಕೆಲಸವೆಂದು ಮುನ್ನಡೆಯುತ್ತಿದ್ದಾರೆ.
ಅವರು ಬೇರೆ ಯಾರೂ ಅಲ್ಲಾ, ಸತೀಶ ಮಾಳಗೊಂಡ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಪಿಐಯಾಗಿದ್ದರು. ಇವರು ಅಲ್ಲಿಂದ ವರ್ಗಾವಣೆಯಾದ ನಂತರ ಪಾಕಿಸ್ತಾನ ಘೋಷಣೆ ಮಾರ್ಧನಿಸಿತ್ತು. ಆಗ, ಅಲ್ಲಿದ್ದ ಇನ್ಸಪೆಕ್ಟರ್ ಜಾಕ್ಸನ್ ಡಿಸೋಜಾ ಜಾರ್ಜಸೀಟ್ ಹಾಕದೇ ಅಮಾನತ್ತಾಗುವ ಸ್ಥಿತಿ ಬಂದೋದಗಿದ್ದು, ಕೂಡಾ ಹಳೆಯ ವಿಚಾರ.
ಸತೀಶ ಮಾಳಗೊಂಡ ಸೈಬರ್ ಠಾಣೆಗೆ ಬಂದ ನಂತರ ಕೆಲವೇ ದಿನಗಳಲ್ಲಿ ಹಳೇಹುಬ್ಬಳ್ಳಿ ಠಾಣೆಗೆ ಇನಜಾರ್ಜ್ ಆದ್ರು. ಅದ್ಕೆ ಕಾರಣವಾಗಿದ್ದು ಪ್ರೂಟ್ ಇರ್ಫಾನ್ ಮರ್ಡರ್ ಕೇಸ್. ಅಲ್ಲಿಯೂ ಕೂಡಾ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ, ಯಾವುದೇ ಗೊಂದಲಗಳು ಸೃಷ್ಠಿಯಾಗದಂತೆ ನೋಡಿಕೊಂಡರು.
ಇಂತಹ ಸತೀಶ ಮಾಳಗೊಂಡರಿಗೆ ಇದೀಗ ವಿವಾದದ ಕೇಂದ್ರಬಿಂದುವಾಗಿರುವ ನವನಗರ ಎಪಿಎಂಸಿ ಠಾಣೆಗೆ ನಿಯೋಜನೆ ಮಾಡಿದ್ದಾರೆ.
ಇನ್ಸಪೆಕ್ಟರ್ ಸತೀಶ ಮಾಳಗೊಂಡ, ಎಪಿಎಂಸಿ ಠಾಣೆಯನ್ನ ಮತ್ತೂ ಸಾಮೂಹಿಕ ವರ್ಗಾವಣೆಗೆ ಮುಂದಾಗಿದ್ದ ಸಿಬ್ಬಂದಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಅಷ್ಟೇ, ಜನರಲ್ಲಿ ಸೃಷ್ಟಿಯಾಗಿರುವ ಬೇಸರವನ್ನ ದೂರ ಮಾಡುವ ಜವಾಬ್ದಾರಿಯೂ ಮಾಳಗೊಂಡರ ಮೇಲಿದೆ. ಅದೇಲ್ಲವನ್ನೂ ಕವಿ ಮನಸ್ಸಿನ ಸತೀಶ ಅವರು ನಿಭಾಯಿಸುತ್ತಾರೆಂಬ ಭರವಸೆ ಅವರ ಬಗ್ಗೆ ಗೊತ್ತಿದ್ದ ಎಲ್ಲರಿಗೂ ಅನಿಸಿರತ್ತೆ…