Posts Slider

Karnataka Voice

Latest Kannada News

BSY ಓಟಿಗಾಗಿ ಪಂಚಮಸಾಲಿ ಸಮಾಜ ಬಳಕೆ: ಸದಾನಂದ ಡಂಗನವರ..!

1 min read
Spread the love

ಹುಬ್ಬಳ್ಳಿ:  ತಾಲೂಕ ಪಂಚಮಸಾಲಿ ಸಮಾಜದ ವತಿಯಿಂದ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಇಂದು ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿಗೆ ಸಮಾಜದ ಮುಖಂಡರು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸದಾನಂದ.ವಿ.ಡಂಗನವರ ರವರ ನೇತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಲಾಯಿತು.

ಈ ಸಮಯದಲ್ಲಿ ಮಾತನಾಡಿದ ಸದಾನಂದ ಡಂಗನವರ, ಪಂಚಾಮಸಾಲಿ ಸಮಾಜ ಶೋಷಣೆಗೆ ಒಳಗಾಗಿದೆ. ರೈತಾಪಿ ಕುಟುಂಬದಿಂದ ಬಂದಿರುವ ಸಮಾಜಕ್ಕೆ ನ್ಯಾಯ ಸಿಗಬೇಕಿದೆ ಎಂದರು.

ಸಿಎಂ ಯಡಿಯೂರಪ್ಪನವರು ಈ ಸಮಾಜವನ್ನ ಕೇವಲ ಮತಕ್ಕಾಗಿ ಪಂಚಮಸಾಲಿ ಸಮಾಜವನ್ನ ಬಳಕೆ ಮಾಡಿಕೊಳ್ಳಬಾರದು. ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಡಂಗನವರ ಹೇಳಿದರು.

ಸಮಾಜದ ಮುಖಂಡರಾದ. ಈಶ್ವರ್ ಶಿರಸಂಗಿ ಗಂಗಾಧರ್ ದೊಡವಾಡ, ಶಂಕರಲಿಂಗ ಮಲಕಣ್ಣವರ, ಪವನ್ ಹಳ್ಯಾಳ . ಚಿದಾನಂದ ಶಿಶ್ವಿನಹಳ್ಳಿ ಕುಮಾರ ಕುಂದನಹಳ್ಳಿ ಚಂದ್ರು ಉಣಕಲ್ ಎಲ್ಲಪ್ಪ ಹಳ್ಯಾಳ ಶಿವಾನಂದ ಮಾಯಕಾರ ಮುಂತಾದವರು ಉಪಸ್ಥಿತರಿದ್ದರು


Spread the love

Leave a Reply

Your email address will not be published. Required fields are marked *

You may have missed