Posts Slider

Karnataka Voice

Latest Kannada News

“ಅವನೊಬ್ಬ ಕಳ್ಳ” ಕ್ಯಾರಕಟ್ಟಿ ಬಂಧನ

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವಲಯ ಕಚೇರಿ 11ರಲ್ಲಿ ನಿಲ್ಲಿಸಿದ್ದ 9 ವಾಹನಗಳ ಬ್ಯಾಟರಿಯನ್ನ ಕದ್ದು ಮುಚ್ಚಿಕೊಂಡಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಕಸಬಾಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ವಲಯ 11ರಲ್ಲಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಟಿಪ್ಪರ್ ವಾಹನದ 9 ಬ್ಯಾಟರಿಗಳನ್ನ ಕಳ್ಳತನ ಮಾಡಿದ್ದ ಪ್ರಭು ಹನುಮಂತ ಕ್ಯಾರಕಟ್ಟಿ ಎಂಬಾತನನ್ನ ಬಂಧನ ಮಾಡಿದ್ದು, ಈತ ಕೂಡಾ ಇವೇ ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಆರೋಪಿ ಪ್ರಭು ಕ್ಯಾರಕಟ್ಟಿಯಿಂದ 9 ಬ್ಯಾಟರಿ ಹಾಗೂ ಇವುಗಳನ್ನ ಸಾಗಿಸಲು ಬಳಕೆ ಮಾಡಿದ ವಾಹನವನ್ನೂ ವಶಕ್ಕೆ ಪಡೆಯಲಾಗಿದ್ದು, ಇವೆಲ್ಲದರ ಮೌಲ್ಯ 5 ಲಕ್ಷ 27 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಡಿಸಿಪಿಗಳಾದ ಕೆ.ರಾಮರಾಜನ್ ಹಾಗೂ ಬಸರಗಿ ಮಾರ್ಗದರ್ಶನದಲ್ಲಿ ಕಸಬಾಪೇಟೆ ಠಾಣೆಯ ಇನ್ಸಪೆಕ್ಟರ್ ರತನಕುಮಾರ ಜೀರಗ್ಯಾಳ ತಂಡ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟರಿ ಕಳ್ಳತನದಿಂದ 9 ವಾಹನಗಳು ನಿನ್ನೆ ಇಡೀ ದಿನ ಕಸ ಸಂಗ್ರಹಣೆ ಮಾಡುವುದನ್ನ ನಿಲ್ಲಿಸುವಂತಾಗಿತ್ತು. ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಆರೋಪಿ ಸಿಕ್ಕಿಬಿದ್ದಿದ್ದು, ಕಸ ಸಂಗ್ರಹಣೆ ಮತ್ತೆ ಯಥಾವತ್ತಾಗಿ ಮುಂದುವರೆದಿದೆ.


Spread the love

Leave a Reply

Your email address will not be published. Required fields are marked *