Posts Slider

Karnataka Voice

Latest Kannada News

ಆರು ತಿಂಗಳಲ್ಲಿ 15ಕ್ಕೂ ಹೆಚ್ಚು ಪತ್ರಕರ್ತರ ಸಾವು- ಕೊರೋನಾ ವಾರಿಯರ್ಸ್ ಅಂತಾ ಪರಿಗಣಿಸಿ

1 min read
Spread the love

ಹುಬ್ಬಳ್ಳಿ: ಈ ವರ್ಷದ ಫೆಬ್ರುವರಿಯಿಂದ ಕೊರೋನಾ ವೈರಸ್ ಹಾವಳಿ ರಾಜ್ಯದಲ್ಲಿ ಆರಂಭವಾಗಿದ್ದು, ಅಂದಿನಿಂದಲೇ ಸಮಾಜವನ್ನ ಎಚ್ಚರಿಸುತ್ತ ವೈರಸ್ ನ ಹಾವಳಿಯನ್ನ ವಿವರಿಸುತ್ತ ಮುನ್ನಡೆದಿದ್ದು, ಮಾಧ್ಯಮದವರೇ, ಅಲ್ಲಿಯೇ 15ಕ್ಕೂ ಹೆಚ್ಚು ಜನರು ಕೋವಿಡ್-19ನಿಂದ ಮರಳಿ ಬಾರದ ಜಾಗಕ್ಕೆ ತೆರಳಿದ್ದಾರೆ.

ಕೆಲವರಿಗೆ ಈ ವಿಷಯ ಪತ್ಯವಾಗಲಾರದು. ಹೇಳಿದ್ದನ್ನೇ ಹೇಳ್ತಾರೆ. ಬಹಳಷ್ಟು ಭಯ ಬೀಳಿಸ್ತಾರೆ ಎಂದೇಲ್ಲ ಹೇಳುವವರೂ ಕೂಡಾ, ಇಂದು ಜಾಗೃತೆಯಿಂದ ಇರೋದಕ್ಕೆ ಮಾಧ್ಯಮದವರೇ ಕಾರಣ ಎಂದು ಅರಿತು ಜೀವನ ನಡೆಸಬೇಕಾಗಿದೆ.

ಕೊರೋನಾ ರಾಜ್ಯದಲ್ಲಿ ತನ್ನ ಬಾಹುವನ್ನ ವ್ಯಾಪಿಸುತ್ತ ಮುನ್ನಡೆದಾಗ, ಗಲ್ಲಿ ಗಲ್ಲಿಗೆ ಹೋಗಿ ಮಾಹಿತಿಯನ್ನ ತಂದು ಸಮಾಜದ ಮುಂದೆ ಈಡುತ್ತಿದ್ದ 15ಕ್ಕೂ ಹೆಚ್ಚು ಪತ್ರಕರ್ತರು ಇಂದು ಇದೇ ವೈರಸ್ ಗೆ ಬಲಿಯಾಗಿದ್ದಾರೆ. ಕೆಲವೊಬ್ಬರು ಇದೇ ಸಮಯದಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಯಾವುದೇ ಇಲಾಖೆಯ ನೌಕರನಿಗೆ ವೈರಸ್ ತಗುಲಿದಾಗಲೂ, ಶಿಕ್ಷಕರ ಬದುಕಿಗೆ ತೊಂದರೆಯಾದಾಗಲೂ ಸರಕಾರದ ಕಣ್ಣು ತೆರಸುವ ಪ್ರಯತ್ನ ಮಾಡಿದ್ದು, ಇದೇ ಮಾಧ್ಯಮಗಳು ಅನ್ನುವುದನ್ನ ಶಿಕ್ಷಕ ಸಮೂಹ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.

ಇಷ್ಟೇಲ್ಲ, ಇದ್ದಾಗಲೂ ಪತ್ರಕರ್ತರನ್ನ ಕೊರೋನಾ ವಾರಿಯರ್ ಎಂದು ಪರಿಗಣಿಸಿಯೇ ಇಲ್ಲ. ಈಗಾಗಲೇ ಮೃತಪಟ್ಟ ಪತ್ರಕರ್ತರ ಕುಟುಂಬಗಳನ್ನ ಒಮ್ಮೆ ಹೋಗಿ ನೋಡಬನ್ನಿ. ಆಗ, ನಿಮಗೆ ಸತ್ಯದ ಅರಿವಾಗಿರತ್ತೆ. ಎಲ್ಲರ ಪರಿಚಯವಿದ್ದರೂ, ಮನೆಯಲ್ಲಿ ಅದೇ ಸಂಬಳದ ಬದುಕು ಕಟ್ಟಿಕೊಂಡಿರುತ್ತಾನೆ ಪತ್ರಕರ್ತ.

ಈಗಲೂ ಕಾಲ ಮಿಂಚಿಲ್ಲ. ಸರಕಾರ ಪತ್ರಕರ್ತರನ್ನೂ ಕೊರೋನಾ ವಾರಿಯರ್ ಎಂದು ಪರಿಗಣಿಸಿ, 30ಲಕ್ಷ ಕುಟುಂಬಕ್ಕೆ ಬರುವಂತೆ ಮಾಡಿ, ಅದೇ ಹಣದಲ್ಲಿ ಆ ಕುಟುಂಬಗಳು ಬದುಕು ಕಟ್ಟಿಕೊಳ್ಳಲಿ. ಏಕೆಂದರೆ, ದುಡಿಸಿಕೊಂಡ ಸಂಸ್ಥೆಗಳು, ಅವರಿರುವ ತನಕ ಮಾತ್ರ. ನಂತರ ಅವರುಂಟು-ಇವರುಂಟು ಅನ್ನೋ ಸ್ಥಿತಿಯಿದೆ.

ಸರಕಾರ ಇದನ್ನ ಮನಗಂಡು ಪತ್ರಕರ್ತ ವಲಯವನ್ನ ಕೊರೋನಾ ವಾರಿಯರ್ ಎಂದು ಪರಿಗಣಿಸಬೇಕೆಂದು ಬಹುತೇಕರ ಆಗ್ರಹವಾಗಿದೆ.


Spread the love

Leave a Reply

Your email address will not be published. Required fields are marked *