ಪಪ್ಪಿ ರಾಯನಗೌಡ-ಅನಿಲಕುಮಾರ ಪಾಟೀಲ ನಡುವೆ ಬಡಿದಾಟ: ಪೊಲೀಸ್ ಠಾಣೆಯಲ್ಲಿ ‘ಎಫ್ಐಆರ್’…
ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ಪ್ರಫುಲಚಂದ್ರ ರಾಯನಗೌಡ್ರ, ಪುತ್ರ ಪ್ರಭುದೇವ ರಾಯನಗೌಡ್ರ ಹಾಗೂ ಸಂಬಂಧಿ ರಾಜನಗರದ ಅನಿಲಕುಮಾರ ಪಾಟೀಲ ಮಧ್ಯೆ ಭಾನುವಾರ ರಾತ್ರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹ ಬಳಿ ಹೊಡೆದಾಟ ನಡೆದ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಗುರಾಯಿಸಿ ನೋಡಿದ ಕಾರಣಕ್ಕೆ ಪ್ರಫುಲ್ಲಚಂದ್ರ ಅವರ ಪುತ್ರ ಪ್ರಭುದೇವ ಹಾಗೂ ಅನಿಲಕುಮಾರ ಮಧ್ಯೆ ಕಟಿಂಗ್ ಶಾಪ್‌ನಲ್ಲಿ ಜಗಳವಾಗಿ, ಹೊಡೆದಾಟಕ್ಕೆ ತಿರುಗಿತ್ತು.
ಬಳಿಕ ಮಾಜಿ ಕಾರ್ಪೋರೇಟರ್ ಪ್ರಫುಲಚಂದ್ರ ಮಧ್ಯಪ್ರವೇಶಿಸಿದ್ದರು. ಈ ವೇಳೆ ಅನಿಲಕುಮಾರ ಕತ್ತರಿಯಿಂದ ಪ್ರಫುಲಚಂದ್ರ ಅವರ ಎಡಗೈಗೆ ಹೊಡೆದು ಗಾಯಪಡಿಸಿದ್ದಾರೆ. ಪ್ರಫುಲ್ಲಚಂದ್ರ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ ಎಂದು ದೂರು, ಪ್ರತಿದೂರಿನಲ್ಲಿ ವರದಿಯಾಗಿದೆ. ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.