“ಟ್ವಿನ್ಸ್”ಗೆ ಜನ್ಮ ನೀಡಿದ ಚೆಲುವಿನ ಚಿತ್ತಾರ…!
1 min read
ಬೆಂಗಳೂರು: ಮಹಾಶಿವರಾತ್ರಿಯ ದಿನದಂದೇ ಸ್ಟಾರ್ ಚಿತ್ರ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟಿ ರಾಜಕಾರಣಿ ರಾಮಚಂದ್ರ ಅವರ ಮಗ ಜಗದೀಶ ಅವರನ್ನ ವರಿಸಿದ ನಂತರ ಚಿತ್ರರಂಗದಿಂದ ದೂರವುಳಿದಿದ್ದರು.

ಇತ್ತೀಚೆಗೆ ಅಮೂಲ್ಯ ಅವರ ವಿಷಯವಾಗಿ ಖಾಸಗಿ ವಾಹಿನಿಯೊಂದರಲ್ಲಿ ಬಂದ ಸುದ್ದಿಯೊಂದು ರಾಜ್ಯಾಧ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಅಮೂಲ್ಯ ಟ್ವಿನ್ಸಗೆ ಜನ್ಮ ನೀಡಿದ್ದು, ಎರಡು ಗಂಡು ಮಕ್ಕಳು ಆರೋಗ್ಯವಾಗಿದ್ದಾರೆಂದು ಗೊತ್ತಾಗಿದೆ.