“Online Betting” ಬಂದ್ ಮಾಡಿಸೋ “ಶಕ್ತಿ” ರಾಜಕಾರಣಿಗಳಲ್ಲಿ ಇದೇಯಾ…!? ಊರಿಗೆ ಊರೇ ಹಾಳಾಗ್ತಿವೆ, ಈ ಸತ್ಯ ನಿಮ್ಮ “ಅರಿವಿಗೆ” ಯಾವಾಗ ಬರತ್ತೆ…!?

ಧಾರವಾಡ: ಮಧ್ಯಮವರ್ಗ, ಬಡವರ ಮತ್ತು ಶ್ರೀಮಂತರ ಮಕ್ಕಳು ತಂದೆ-ತಾಯಿಗಳ ಒಡಲಿಗೆ ಬೆಂಕಿ ಹಚ್ಚಲು ಈ ಆನ್‌ಲೈನ್ ಜೂಜಾಟ ಕಾರಣವಾಗಿದ್ದು, “ಅದು-ಇದು” ಮಾತಾಡುವ ರಾಜಕಾರಣಿಗಳು ಈ ಆನ್‌ಲೈನ್ ಕರಾಳತೆಯನ್ನ ಅರಿತುಕೊಳ್ಳುವ ಮನುಷ್ಯತ್ವ ಪ್ರದರ್ಶನ ಮಾಡಬೇಕಿದೆ.
ಹೌದು… ಕ್ರಿಕೆಟ್, ಅಂದರ್-ಬಾಹರ್, ಡ್ರೀಮ್… ಹೀಗೆ ಸಾಗುತ್ತೆ ಈ ಹಾಳು ಮಾಡು ಸಂತತಿಗಳ ಬೆಟ್ಟಿಂಗ್ ದಂಧೆ. ಶಹರ, ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದ ಯುವ ಪಡೆ ಈ ಹುಚ್ಚಾಟದಲ್ಲಿ ಜೀವನವನ್ನ ಅಂತ್ಯಗೊಳಿಸುತ್ತಿದ್ದಾರೆ ಮತ್ತೂ ಅಂತ್ಯಗೊಳಿಸುವ ಸನಿಹದಲ್ಲಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ.
ದುಡಿಯದೇ ಕನಸು ಕಾಣುವ ಜೂಜುಕೋರರಿಗೆ “ಪ್ರೋವೊಕ್” ಮಾಡುವ ಜಾಹೀರಾತು ಕೂಡಾ ಬೇರೆ. ಯಾರಿಗೂ ಗೊತ್ತಾಗದೇ ಹಾಗೆ ಮೊಬೈಲ್ ಹಿಡಿದುಕೊಂಡು ಕೂತರೇ ಮುಗಿದುಹೋಯಿತು. ಇದ್ದಬದ್ದ ಹಣ ಕಳೆದುಕೊಂಡು “ನಾಳೆ ಕೊಡ್ತೀನಿ, ಪೋನ್ ಪೇ ಮಾಡೋ” ಎಂದು ಹೇಳಿಸಿಕೊಂಡು ಸಾಲ ಪಡೆದು ಅದನ್ನೂ ಕಳೆದುಕೊಂಡು ದಾರಿ ತಪ್ಪುತ್ತಿದ್ದಾರೆ.
ರಾಜಕಾರಣಿಗಳೇ, ನೀವೂ ನಿಜವಾಗಿಯೂ ಸಾರ್ವಜನಿಕರ ಬದುಕಿಗೆ ಚೂರಾದರೂ ಸಂತಸವನ್ನ ಕೊಡುವ ಜೊತೆಗೆ ಉಮೇದಿಯನ್ನ ಹೆಚ್ಚಿಸಬೇಕೆಂಬ ಅಭಿಪ್ರಾಯ ನಿಮ್ಮಲ್ಲಿ ಮೂಡಿದರೇ, ಬೆಟ್ಟಿಂಗ್ ದಂಧೆಯನ್ನ ನಿಲ್ಲಿಸಿ.
ರಾಜ್ಯ ಸರಕಾರದವರು ಕೇಂದ್ರ ಸರಕಾರದ ಮೇಲೆಯೂ, ಕೇಂದ್ರ ಸರಕಾರದವರೂ ರಾಜ್ಯ ಸರಕಾರದ ಮೇಲೆಯೂ ಹಾಕುತ್ತ ಮುನ್ನಡೆಯುವ “ಡ್ರಾಮಾ” ಆಗಬಾರದಿದು. ಬಡವರ, ಮಧ್ಯಮವರ್ಗದ ಕುಟುಂಬಗಳನ್ನ ಉಳಿಸಿ. ಇದರ ಜೊತೆಗೆ ದಾರಿ ತಪ್ಪಿದ ಶ್ರೀಮಂತರ ಮಕ್ಕಳ ಜೀವನವನ್ನ ಉಳಿಸಿ.
ಸಂಘಟನೆಗಳಂತೂ ಸರಕಾರಗಳಿಗಿಂತಲೂ ತೀರಾ ಕಳೆಗುಂದಿ ಹೋಗುತ್ತಿವೆ. ರಾಜ್ಯದಲ್ಲಿನ ಕನ್ನಡಪರ, ಮಹಿಳಾಪರ ಇರುವ ಸಂಘಟನೆಗಳು “ಬೆಟ್ಟಿಂಗ್ ಕರಾಳತೆ” ಅರಿತುಕೊಳ್ಳಬೇಕು. ಇಲ್ಲದಿದ್ದರೇ, ನೀವೂ ಕೂಡಾ ಈ ವರ್ಗದ ಜನರ ಶಾಪ ನಿಮ್ಮನ್ನೂ ಬಿಡಲಾರದು.
ಚೂರಾದರೂ ಏಳಿ ಎದ್ದೇಳುವ ಮನಸ್ಸು ಮಾಡಿ. ಈ ಬೆಟ್ಟಿಂಗ್ ಭೂತವನ್ನ ಕೊನೆಗಾಣಿಸಿ, ದಯವಿಟ್ಟು…