Posts Slider

Karnataka Voice

Latest Kannada News

“ಅಣ್ಣ ನಿಂಗಪ್ಪ”ನನ್ನ “ತಮ್ಮ ಕಲ್ಲಪ್ಪ” ಮಚ್ಚಿನಿಂದ ಕೊಚ್ಚೋ ವೀಡೀಯೋ ವೈರಲ್…!!!

1 min read
Spread the love

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೆರಿಓಣಿ ನಿವಾಸಿಯನ್ನ ತಮ್ಮನೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಪ್ರಕರಣದ ವೀಡಿಯೋ ವೈರಲ್ ಆಗಿದ್ದು, ಭಯಾನಕವಾಗಿದೆ.

ನಿಂಗಪ್ಪ ಹಡಪದನನ್ನ ಆತನ ಸಹೋದರನೇ ಕಲ್ಲಪ್ಪ ಹಡಪದ ಎಂಬಾತನೇ ಮಚ್ಚಿನಿಂದ ಹೊಡೆದಿದ್ದು, ಜೊತೆಗೆ ಆತನ ಮೂರು ಮಕ್ಕಳಿರುವುದು ವೀಡಿಯೋದಲ್ಲಿದೆ ಎಂದು ಹೇಳಲಾಗಿದೆ.

ನಿಂಗಪ್ಪ ಸತ್ತರೂ ತಲ್ವಾರನಿಂದ ಕೊಚ್ಚುತ್ತಿದ್ದ ಕಲ್ಲಪ್ಪನನ್ನ ಕರೆದುಕೊಂಡು ಹೋಗುತ್ತಿರುವ ಪುತ್ರ

ನಿಂಗಪ್ಪ ಹಡಪದ ಸಹೋದರರ ಭಯದಿಂದ ಧಾರವಾಡದಲ್ಲಿ ವಾಸವಾಗಿದ್ದ. ಆತನ ಚಲನವಲನ ಗಮನಿಸಿರುವ ಕೊಲೆಗಾರರು ಸಮಯ ಸಾಧಿಸಿ ಹತ್ಯೆ ಮಾಡಿದ್ದಾರೆ.

ಸಾರ್ವಜನಿಕರು ಸಂಚರಿಸುತ್ತಿದ್ದರೂ ಯಾವುದೇ ಭಯವಿಲ್ಲದೆ ಹತ್ಯೆ ಮಾಡುತ್ತಿರುವ ದೃಶ್ಯಾವಳಿಗಳನ್ನ ಸ್ಥಳೀಯ ಯುವಕನೋರ್ವ ವೀಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.

ವೀಡಿಯೋ ಭಯಾನಕವಾಗಿರುವುದರಿಂದ ಅದನ್ನ ಇಲ್ಲಿ ಬಳಸಲಾಗಿಲ್ಲ.


Spread the love

Leave a Reply

Your email address will not be published. Required fields are marked *