ಹುಬ್ಬಳ್ಳಿಯ ಜಾಲಿಗಿಡದ ಮಧ್ಯದಲ್ಲಿ “ಅವರಿಬ್ಬರ” ನಡುವೆ ಅದು ನಡೆಯದಿದ್ದಕ್ಕೆ ಹತ್ಯೆ- IPS ಹೇಳಿದ್ದೇನು…!?

ಅಸಹಜ ಲೈಗಿಂಕ ಕ್ರಿಯೆಗೆ ಒಪ್ಪದ ಅಜ್ಜನನ್ನೇ ಕೊಲೆ ಮಾಡಿದ ಗೌಸ್ ಮೊಹ್ಮದ್; ಹುಬ್ಬಳ್ಳಿಯಲ್ಲೊಂದು ವಿಚಿತ್ರ ಮರ್ಡರ್
ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಪ್ರಸ್ಥ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಸೋನಿಯಾಗಾಂಧಿನಗರದ ಕುಮಾರ್ ಬೆಟಗೇರಿ ಸಾವಿಗೆ ಇದೀಗ ಟ್ವೀಸ್ಟ್ ಸಿಕ್ಕಿದ್ದು, ಕುಮಾರನನ್ನು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಆರೋಪಿಯನ್ನು ಬಂಧನ ಮಾಡಿ ಜೈಲಿಗೆಟ್ಟುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಹಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ವೀಡಿಯೋ….
ಕಳೆದ ಡಿಸೆಂಬರ್ 22 ರಂದು ಇಂದ್ರಪ್ರಸ್ಥ ಕಾಲೊನಿಯಲ್ಲಿ ರೈಲ್ವೇ ನಿಲ್ದಾಣದ ಬಳಿಯಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದ 57 ವರ್ಷದ ಕುಮಾರ್ ಬೆಟಗೇರಿ ಎಂಬಾತನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.ಹೀಗಾಗಿ ಕೇಶ್ವಾಪುರ ಠಾಣೆಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗರಕ್ಕೆ ರವಾನೆ ಮಾಡಿದಾಗ,ಕುಮಾರ್ ನನ್ನು ಕತ್ತು ಹಿಸುಕಿ ಸಾಯಿಸರುವ ಮಾಹಿತಿ ಗೊತ್ತಾದ ಹಿನ್ನೆಲೆ ಕೇಶ್ವಾಪುರ ಠಾಣೆಯ ಪೊಲೀಸರು ಅಲರ್ಟ್ ಆಗಿ ತನಿಖೆ ಶುರು ಮಾಡುತ್ತಾರೆ.
ಆಗ ಸಿಸಿ ಕ್ಯಾಮರಾ ದ್ರಶ್ಯಾವಳಿಗಳನ್ನು ಪರಿಶೀಲಿಸಿದಾಗ ದೇವಾಂಗಪೇಟೆಯ ಗೌಸ್ ಮೊಹ್ಮದ್ ಎಂಬಾತನ ಜೊತೆ ಇಂದ್ರಪ್ರಸ್ಥ ಕಾಲೋನಿಗೆ ಕೊಲೆಯಾದ ಕುಮಾರ್ ಹೋಗಿರುವ ಮಾಹಿತಿ ಗೊತ್ತಾಗಿ ಪೊಲೀಸರು ಗೌಸ್ ಮೊಹ್ಮದ್ ನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಕುಮಾರ್ ನನ್ನು ಕೊಲೆ ಮಾಡಿರೋ ಮಾಹಿತಿ ಬಹಿರಂಗವಾಗಿದೆ.ಕುಮಾರ್ ನನ್ನು ಅನೈಸರ್ಗಿಕ್ ಲೈಂಗಿಕ ಕ್ರಿಯೆ ಮಾಡುವಂತೆ ಗೌಸ್ ಮೊಹ್ಮದ್ ಒತ್ತಾಯ ಮಾಡಿದಾಗ ಕುಮಾರ್ ವಿರೋಧ ಮಾಡಿದ್ದಾನೆ.ಇದರಿಂದ ಸಿಟ್ಟಿಗೆದ್ದ ಗೌಸ್ ಕುಮಾರ್’ನ ಕತ್ತು ಹಿಸುಕಿ ಕೊಲೆ ಮಾಡಿ ಆತನ ಬಳಿ ಇದ್ದ 1 ಸಾವಿರ ಹಣ ತೆಗೆದುಕೊಂಡು ಏಸ್ಕೇಪ್ ಆಗಿದ್ದ.
ಸದ್ಯ ಕೊಲೆಯ ಆರೋಪಿ ಗೌಸ್ ಮೊಹ್ಮದ್ ಮಾಡಬಾರದ ಕೆಲ್ಸ ಮಾಡಲು ಹೋಗಿ ಕೊಲೆ ಮಾಡಿ ಜೈಲು ಪಾಲಾದ್ರೆ, ಮಾಡಬಾರದ ವ್ಯಕ್ತಿಯ ಜೊತೆ ಸ್ನೇಹ ಮಾಡಿದ ತಪ್ಪಿಗೆ ಕುಮಾರ್ ಮಷಣ ಸೇರಿದ್ದಾನೆ. ಈ ಪ್ರಕರಣವನ್ನು ಭೇದಿಸಿದ ಕೇಶ್ವಾಪುರ ಠಾಣೆಯ ಇನ್ಸ್ಪೆಕ್ಟರ್ ಹಟ್ಟಿ ನೇತೃತ್ವದ ತಂಡಕ್ಕೆ ಕಮಿಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.