ಬೆಳೆವಿಮೆ “ಪರಿಹಾರ 50-50” ದಂಧೆಯ ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ರಾಜ್ಯ ಸರಕಾರ…!!!

ಧಾರವಾಡ: ಕೆಲ ಶ್ರೀಮಂತ ರೈತರು ನೀಚ ಏಜೆಂಟ್‌ರೊಂದಿಗೆ ಬೆಳೆವಿಮೆ ಪರಿಹಾರದಲ್ಲಿ ಫಿಪ್ಟಿ-ಫಿಪ್ಟಿ ಮಾಡಿಕೊಳ್ಳುವ ವಂಚನೆಯ ಬಗ್ಗೆ ಸಮಗ್ರವಾಗಿ ತನಿಖೆ ಮಾಡಲು ಜಿಲ್ಲಾಧಿಕಾರಿ ಮತ್ತು ಕೃಷಿ ಜಂಟಿ ನಿರ್ದೇಶಕರುಗಳಿಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಕರ್ನಾಟಕವಾಯ್ಸ್.ಕಾಂ ನವೆಂಬರ್ ತಿಂಗಳಿಂದ ನಿರಂತರವಾಗಿ ಬೆಳೆವಿಮೆ ಪರಿಹಾರದಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಮಾಹಿತಿಯನ್ನ ಹೊರಹಾಕಿತ್ತು. ತದನಂತರ ಹಲವರು ಹಲವು ರೀತಿಯಲ್ಲಿ ನಾಟಕಗಳನ್ನ ಮುಂದುವರೆಸಿದ್ದಾರೆ.
ಈಗ ರಾಜ್ಯ ಸರಕಾರವೇ ಆದೇಶ ಮಾಡಿದ್ದು ಕರ್ನಾಟಕವಾಯ್ಸ್. ಕಾಂ ಬಳಕೆ ಮಾಡಿದ್ದ “50-50” ಅಂಶದ ಕುರಿತು ಉಲ್ಲೇಖ ಮಾಡಿದ್ದು, ಮಾಹಿತಿ ಹೊರಹಾಕಿದ್ದಕ್ಕೆ ತಾತ್ಕಾಲಿಕವಾಗಿ ಜಯ ಸಿಕ್ಕಂತಾಗಿದೆ.
ಕೆಲ ಶ್ರೀಮಂತ ಹಾಗೂ ಏಜೆಂಟರ್ ಜೊತೆ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯವರು ಶಾಮೀಲಾಗಿರುವ ಕುರಿತು ಸಾಕಷ್ಟು ವಿವರಗಳು ‘ಕೆವಿ’ಗೆ ಲಭಿಸಿದ್ದು, ಹಲವರ ಮುಖವಾಡಗಳು ಬಯಲಾಗಲಿವೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕೂಡಾ ಈ ಬಗ್ಗೆ ಗಮನ ನೀಡಬೇಕಿದೆ. 2024ರ ಮುಂಗಾರು ಬೆಳೆಯಲ್ಲಿ ಹೆಸರು ಬೆಳೆಯ ‘ಬೆಳೆವಿಮೆ’ ಪರಿಹಾರ 50-50 ವಂಚನೆಯ ತನಿಖೆ ನಡೆಯುತ್ತಿದ್ದಾಗಲೇ, ಹಿಂಗಾರು ಬೆಳೆಯಲ್ಲೂ ವಂಚನೆ ಮಾಡಲು ಕಡಲೆಬೆಳೆಯ ಮೇಲೆ ಎನ್‌ರೋಲ್ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಆಸಕ್ತಿ ವಹಿಸಬೇಕಿದೆ.