ರಾಜ್ಯದ ಪ್ರಭಾವಿ ರಾಜಕಾರಣಿ ಸಂಬಂಧಿ: ಹುಬ್ಬಳ್ಳಿ ಕೊಲೆಗೆ ಸ್ಕೇಚ್ ನಡೆದಿದ್ದು ಹೇಗೆ..! ಏಕೆ..?
1 min readಸಂತೋಷ ಜಿ.ಎಸ್ ಹೆಂಡತಿ ಲತಾಳೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟ ನಂತರ ಸಂತೋಷ, ಲತಾರ ಕುಟುಂಬದೊಂದಿಗೆ ಶತ್ರುತ್ವ ಬೆಳೆಸಿಕೊಂಡಿದ್ದ. ಪದೇ ಪದೇ ಚಾಕು ಹಿಡಿದುಕೊಂಡು ಅಲೆದಾಡುತ್ತಿದ್ದ. ಇವತ್ತು ಅದೇ ಚಾಕುವಿನಿಂದ ಇರಿದು ಮಾವನನ್ನ ಕೊಲೆ ಮಾಡಿದ್ದು, ಅತ್ತೆಯ ಸ್ಥಿತಿಯ ಗಂಭೀರವಾಗಿದೆ.
ಹುಬ್ಬಳ್ಳಿ: ಕಾನೂನು ವಿಶ್ವವಿದ್ಯಾಲಯದ ಪ್ರಾಂಶುಪಾಲರ ಕುಟುಂಬವನ್ನೇ ಮುಗಿಸಲು ಸ್ಕೇಚ್ ಹಾಕಿ, ಮನೆಗೆ ನುಗ್ಗಿ ಕೊಲೆ ಮಾಡಿದ್ದು ಅದೇ ಮನೆಯ ಅಳಿಯ ಎಂಬುದು ಗೊತ್ತಾಗಿದ್ದು, ಕೌಟುಂಬಿಕ ಕಲಹವೇ ಇದಕ್ಕೇಲ್ಲ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತ ಲಾಬು ರಾಮ್ ಹೇಳಿದ್ದಾರೆ.
ದಿನನಿತ್ಯದಂತೆ ವಾಕಿಂಗ್ ಹೋಗಲು ಲಿಂಗರಾಜನಗರದ ಮನೆ ಬಾಗಿಲನ್ನ ತೆಗೆದ ಶಂಕರ ಮುಶಣ್ಣನವರಿಗೆ ಅಳಿಯ ಸಂತೋಷ ಜಿ.ಎಸ್, ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಅದನ್ನ ಬಿಡಿಸಲು ಬಂದ ಅತ್ತಿಗೆಗೂ ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ನಿವೃತ್ತ ಪ್ರಾಂಶುಪಾಲ ಮುಶಣ್ಣನವರ ಸಾವಿಗೀಡಾಗಿದ್ದು, ಮುಶಣ್ಣನವರ ಪತ್ನಿಯ ಸ್ಥಿತಿ ಚಿಂತಾಜನಕವಾಗಿದೆ.
ಮನೆಯಲ್ಲಿದ್ದ ನಿವೃತ್ತ ಪ್ರಾಂಶುಪಾಲರ ಮಕ್ಕಳು ಆರೋಪಿಯನ್ನ ಹಿಡಿದುಕೊಂಡ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯ ವಿಚಾರಣೆಯನ್ನ ವಿದ್ಯಾನಗರ ಠಾಣೆಯಲ್ಲಿ ನಡೆಸಲಾಗುತ್ತಿದೆ.
ಸಂತೋಷ ಜಿ.ಎಸ್. ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ ಕಾರಣದಿಂದ ಪ್ರಕರಣ ನಡೆಯುತ್ತಿತ್ತು. ತನ್ನ ಪತ್ನಿಯೂ ಬಾರದೇ ಮಕ್ಕಳು ಬಾರದೇ ಇದ್ದಿದ್ದರಿಂದ ಪದೇ ಪದೇ ಸಂತೋಷ ಜಿ.ಎಸ್ ಕೊಲೆ ಮಾಡುವ ಬೆದರಿಕೆ ಒಡ್ಡುತ್ತಿದ್ದ ಎಂದು ಹೇಳಲಾಗಿದೆ. ತನ್ನ ಕುಟುಂಬ ಹಾಳಾಗುವುದಕ್ಕೆ ಪತ್ನಿಯ ಮನೆಯವರೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದನೆಂದು ತಿಳಿದು ಬಂದಿದೆ.
ನಿವೃತ್ತ ಪ್ರಾಂಶುಪಾಲ ಮುಶಣ್ಣನವರ ಪತ್ನಿ ರಾಜ್ಯದ ಪ್ರಭಾವಿ ರಾಜಕಾರಣಿಯ ಸಂಬಂಧಿಯಾಗಿದ್ದರೆಂದು ಗೊತ್ತಾಗಿದೆ. ಪ್ರಕರಣ ನಡೆದ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಬು ರಾಮ್ ಆಗಮಿಸಿ, ಪರಿಶೀಲನೆ ನಡೆಸಿದರು. ಅಷ್ಟೇ ಅಲ್ಲ, ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನ ನೀಡಿದರು.