Posts Slider

Karnataka Voice

Latest Kannada News

ಮೊಬೈಲ್ ಅಂಗಡಿ-ಮನೆಗಳ್ಳತನ: ಮಹಿಳೆ ಸೇರಿ ಮೂವರ ಬಂಧನ- ಲಕ್ಷಾಂತರ ರೂಪಾಯಿ ಆಭರಣ ವಶ

1 min read
Spread the love

ಧಾರವಾಡ: ನಗರದ ಅಕ್ಕಿಪೇಟೆಯಲ್ಲಿನ ಬಾಬತ್ ಜ್ಯೋತಿಬಾ ಹೆಸರಿನ ಮೊಬೈಲ್ ಅಂಗಡಿ ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಕೃಷ್ಣಾ ಕೇದಾರಪ್ಪ ಜಾಧವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಬೆಲೆಬಾಳುವ ಮೊಬೈಲ್ ಕದ್ದು ಪರಾರಿಯಾದವರನ್ನ ಬಂಧನ ಮಾಡಿದಾಗ, ವಿದ್ಯಾಗಿರಿಯಲ್ಲಿ ನಡೆದ ಮನೆಗಳ್ಳತನದ ಪ್ರಕರಣವೂ ಬಯಲಿಗೆ ಬಂದಿದೆ.

ಬಂಧಿತರನ್ನ ಧಾರವಾಡ ಹೊಸಯಲ್ಲಾಪುರ ಮಿಣಜಗಿ ಚಾಳದ ವಿನೋದ ದುಂಡಪ್ಪ ಕಿರ್ಗಿ, ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮುಲ್ಲಾ ಓಣಿಯ ನಿಂಗಪ್ಪ ರಮೇಶ ಶೀಲವಂತರ ಹಾಗೂ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮೀನಾಕ್ಷಿ ಮುತ್ತು ಮಂಟೂರ ಎಂದು ಗುರುತಿಸಲಾಗಿದೆ.

ಬಂಧಿತರಿಂದ 79240 ಮೊತ್ತದ ನಾಲ್ಕು ವಿವಿಧ ಕಂಪನಿಯ ಮೊಬೈಲ್ ಫೋನ್, 2ಲಕ್ಷ 20500 ಮೌಲ್ಯದ ಚಿನ್ನಾಭರಣಗಳನ್ನ ವಶಕ್ಕೆ ಪಡೆದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ ಇನ್ಸಪೆಕ್ಟರ ಶ್ರೀಧರ  ಸಾತಾರೆ, ಪೊಲೀಸ ಸಬ್ ಇನ್ಸಪೆಕ್ಟರ (ಅ.ವಿ) ಎಲ್.ಕೆ. ಕೊಡಬಾಳ, ಎಎಸ್‌ಐ ಪಿ.ಬಿ.ಕಾಳೆ, ಸಿಬ್ಬಂದಿಗಳಾದ ಬಿ.ಎಚ್.ಶಿಂಗಣ್ಣವರ, ಎನ್.ಓ.ಜಾಧವ, ಕೆ.ಎ.ಕೊಪ್ಪಳ, ವಿ.ಪಿ.ಕಿಲ್ಲೇದಾರ, ಎಸ್.ಸಿ.ಪಾಟೀಲ, ಯು.ಎನ್.ಸಣ್ಣಿಂಗನವರ, ಡಿ.ವಾಯ್.ಮನ್ನಿಕೇರಿ, ಎಲ್.ಎಸ್.ಲಮಾಣಿ, ಪರಮೇಶ್ವರ ಕುರಿ, ಮಾರುತಿ ಬಡವಣ್ಣವರ ಮತ್ತು ಗುರುನಾಥ ಚಂದರಗಿ, ಬಸವರಾಜ ಕಡಕೋಳ, ಮಹಿಳಾ ಪಿಸಿ ಗಾಯತ್ರಿ ತಿರ್ಲಾಪೂರ  ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


Spread the love

Leave a Reply

Your email address will not be published. Required fields are marked *