ಎಂಎಲ್ಸಿ ಚುನಾವಣೆ: ಕುಬೇರಪ್ಪ ಪರವಾಗಿ ವಿನೋದ ಅಸೂಟಿ ಭರ್ಜರಿ ಪ್ರಚಾರ
ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಆರ್.ಕುಬೇರಪ್ಪ ಪರವಾಗಿ ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ನವಲಗುಂದ ವಿಧಾನಸಭಾ ಮತ ಕ್ಷೇತ್ರ ಕರ್ನಾಟಕ ಪಶ್ಚಿಮ ಪದವೀಧರ ಚುನಾವಣಾ ಪ್ರಚಾರಾರ್ಥವಾಗಿ ಶಿರೂರು, ಬ್ಯಾಲ್ಯಾಳ, ಆಯಟ್ಟಿ, ಗುಮ್ಮಗೊಳ, ಬಳ್ಳೂರು, ಹಾಳಕುಸುಗಲ್, ಶಾನವಾಡ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಆರ್.ಕುಬೇರಪ್ಪ ಅವರನ್ನ ಗೆಲ್ಲಿಸಲು ಕಂಕಣಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ವಿನೋದ ಅಸೂಟಿ, ಕಾಂಗ್ರೆಸ್ ಪಕ್ಷ ಎಲ್ಲ ರಂಗದಲ್ಲೂ ಉತ್ತಮ ಆಡಳಿತ ನಡೆಸುತ್ತ ಬಂದಿದೆ. ಅದನ್ನ ಪದವೀಧರ ಮತದಾರರು ತಿಳಿದುಕೊಂಡು ಮತ ನೀಡಬೇಕೆಂದು ಕೋರಿದರು.
ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೆಗೌಡ, ಬಸಯ್ಯ ಶಿರಟ್ಟಿಮಠ, ಮಡಿವಾಳಪ್ಪ ಮಡಿವಾಳರ, ದ್ಯಾಮಪ್ಪ ಮಡಿವಾಳರ, ನಾಗಪ್ಪ ಸಂಕದ, ಬಸಪ್ಪ ಸಂಕದ, ಉಮೇಶ ನಾಯ್ಕರ, ನಾಗಪ್ಪ ಸಂಕದ, ಬಸುರಾಜ ಚಿಕ್ಕಮಠ, ರಾಮಣ್ಣ ಮಂಟೂರ, ಶಿವಲಿಂಗಯ್ಯ ಚಿಕ್ಕಮಠ, ಬಸವರಾಜ ಶ್ರೀಕಾಂತ ರಾಯಗೊನ್ನವರ, ಶರಣಪ್ಪ ಪವಾಡಿ, ಮುಕ್ತುಂಸಾಬ ಹೆಬಸೂರ, ದಾವಲಸಾಬ್ ಕುದ್ದನ್ನವರ, ಮೊಣಯ್ಯ ಹೊಸಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.