ಬಿಜೆಪಿ ಪಾಲಿಕೆ ಸದಸ್ಯ ಗುಂಡೂರ, ಮಗನ ಮೇಲೆ ಹಲ್ಲೆ…

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸದಸ್ಯ ಹಾಗೂ ಅವರ ಮಗನ ಮೇಲೆ ಹಲವರು ಕೂಡಿಕೊಂಡು ಹಲ್ಲೆ ನಡೆಸಿದ್ದು, ಮನೆಯ ಗಾಜು ಮತ್ತು ಕಾರಿನ ಗಾಜನ್ನ ಪುಡಿ ಪುಡಿ ಮಾಡಿರುವ ಪ್ರಕರಣ ಬೈರಿದೇವರಕೊಪ್ಪದ ಸದಾಶಿವನಗರದಲ್ಲಿ ನಡೆದಿದೆ.
ಇಡೀ ಘಟನೆಯ ದೃಶ್ಯಗಳು ಇಲ್ಲಿವೆ ನೋಡಿ..
ಮಂಜು ಗುಡ್ಡಪ್ಪನವರ ಹಾಗೂ ಆತನ ಸಂಗಡಿಗರು ಕೂಡಿಕೊಂಡು ಘಟನೆ ನಡೆಸಿದ್ದು, ಗಾಯಗೊಂಡ ಸಿದ್ದು ಗುಂಡೂರ ಹಾಗೂ ಮಲ್ಲಿಕಾರ್ಜುನ ಗುಂಡೂರ ಕಿಮ್ಸನಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತಡರಾತ್ರಿಯಿಂದಲೂ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಐವರನ್ನ ಪೊಲೀಸ್ ವಶಕ್ಕೆ ಪಡೆಯಲಾಗಿದೆ.