ಎರಡು ಜಿಲ್ಲೆಗೂ “ಮಹಾನಗರ ಪಾಲಿಕೆ” ಕೊಡಿಸಿದ ಸಚಿವ ಶಂಕರ ಪಾಟೀಲಮುನೇನಕೊಪ್ಪ….
1 min read
ಬೆಂಗಳೂರು: ಹಲವು ವರ್ಷಗಳ ಬೇಡಿಕೆಯನ್ನ ಸದ್ದಿಲ್ಲದೇ ಮಾಡಿ ಮುಗಿಸುವ ಯೋಜನೆಗಳು ರಾಜ್ಯ ಬಜೆಟ್‌ನಲ್ಲಿ ಘೋಷಿಸುವ ಮೂಲಕ ಸಚಿವ ಶಂಕರ ಪಾಟೀಲಮುನೇನಕೊಪ್ಪ ಜನಮನ್ನಣೆ ಗಳಿಸಿಕೊಂಡಿದ್ದಾರೆ.
ನವಲಗುಂದ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಜವಳಿ, ಕೈಮಗ್ಗ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಬೀದರ ಮತ್ತು ರಾಯಚೂರು ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಎರಡು ಜಿಲ್ಲೆಗಳಿಗೆ ಮಹಾನಗರ ಪಾಲಿಕೆಯನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿಸುವ ಮೂಲಕ, ಎರಡು ಜಿಲ್ಲೆಗಳಲ್ಲಿ ತಮ್ಮ ಹೆಸರು ಅಚ್ಚಳಿಯದಂತೆ ನಡೆದುಕೊಂಡಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿಯನ್ನ ಕಾಪಾಡುವ ದೃಷ್ಟಿಕೋನ ಹೊಂದಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಯಾವುದೇ ಪ್ರಚಾರ ಪಡೆಯದೇ ಕೆಲಸ ಮಾಡುವಲ್ಲಿ ನಿಸ್ಸೀಮರು. ಇದೀಗ ಎರಡು ಜಿಲ್ಲೆಯ ನಗರಸಭೆಗಳನ್ನ ಮಹಾನಗರ ಪಾಲಿಕೆ ದರ್ಜೆಗೆ ಏರಿಸುವ ಮೂಲಕ, ತಾವೂ ಉಸ್ತುವಾರಿ ವಹಿಸಿಕೊಂಡ ಎರಡು ಜಿಲ್ಲೆಗಳಿಗೂ ನ್ಯಾಯ ಒದಗಿಸಿದ್ದಾರೆ.
ತಾವು ಪ್ರತಿನಿಧಿಸುವ ನವಲಗುಂದ ಕ್ಷೇತ್ರಕ್ಕೆ ಈಗಾಗಲೇ ಜವಳಿ ಪಾರ್ಕ್, ಸಕ್ಕರೆ ಕಾರ್ಖಾನೆ ಹಾಗೂ ಕೆಮಿಕಲ್ ಕಾರ್ಖಾನೆಯನ್ನ ಪಡೆದುಕೊಂಡಿರುವ ಸಚಿವರು, 25 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಲಿದ್ದಾರೆ.
ರಾಜ್ಯದಲ್ಲಿ ತಮಗೆ ನೀಡಿರುವ ಇಲಾಖೆಯನ್ನ ಭ್ರಷ್ಟಾಚಾರ ರಹಿತವಾಗಿ ನಿರ್ವಹಣೆ ಮಾಡಿದ್ದಲ್ಲದೇ, ರೈತರ, ನೇಕಾರರ ಪರವಾಗಿ ಹಲವು ನಿರ್ಧಾರಗಳನ್ನ ತೆಗೆದುಕೊಂಡು ಅನುಕೂಲ ಮಾಡಿದ್ದಾರೆ.