ಹುಬ್ಬಳ್ಳಿಯಲ್ಲಿ ಮಹಿಳೆಯ ಕೊಲೆ- ಹತ್ಯೆ ಮಾಡಿದ್ದು ಕೂಡಾ ಮಹಿಳೆಯೇ..
1 min readಹುಬ್ಬಳ್ಳಿ: ಅಕ್ಕಪಕ್ಕದ ಮನೆಯಲ್ಲಿ ಆರಂಭಗೊಂಡ ಜಗಳ ಕೊಲೆಯಲ್ಲಿ ಪರ್ಯವ್ಯಸನಗೊಂಡ ಘಟನೆ ನಗರದ ಹೊಸೂರು ವೀರ ಮಾರ್ಗದ ಪ್ರದೇಶದಲ್ಲಿ ನಡೆದಿದ್ದು, ಕೊಲೆ ಮಾಡಿದ ಮಹಿಳೆಯನ್ನ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾದ ಮಹಿಳೆಯನ್ನ ಮಂಜುಳಾ ಮಣ್ಣವಡ್ಡರ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಮಹಿಳೆಯನ್ನ ಗೀತಾ ಎಂದು ಗುರುತಿಸಲಾಗಿದ್ದು, ಜಗಳವಾಡುತ್ತಿದ್ದ ಸಮಯದಲ್ಲಿ ಮಂಜುಳಾ ಎಂಬುವವರನ್ನ ಕೊಲೆ ಮಾಡಿದ್ದಕ್ಕಾಗಿ ವಿದ್ಯಾನಗರ ಠಾಣೆ ಪೊಲೀಸರ ಬಂಧನ ಮಾಡಿದ್ದಾರೆ.
ಇಂದು ಸುಮಾರು ಮೂರು ಗಂಟೆಗೆ ಹೊಸೂರು ಪ್ರದೇಶದಲ್ಲಿ ಅಕ್ಕಪಕ್ಕದ ಮನೆಯವರು ಜಗಳ ಆರಂಭಿಸಿದ್ದಾರೆ. ಆಗ ಗೀತಾ ಎಂಬಾಕೆ ಮಂಜುಳಾ ಎಂಬಾಕೆಯನ್ನ ಹೊಡೆದು ನೆಲಕ್ಕೆ ತಳಿದ್ದಾಳೆ. ರಭಸವಾಗಿ ಮಂಜುಳಾ ನೆಲಕ್ಕೆ ಬಿದ್ದ ಪರಿಣಾಮ, ಕಲ್ಲು ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಂಜುಳಾ ಅವರಿಗೆ ಕಲ್ಲು ಬಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಕಿಮ್ಸಗೆ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು, ಆರೋಪಿ ಗೀತಾಳನ್ನ ಬಂಧನ ಮಾಡಿ, ವಿದ್ಯಾನಗರ ಠಾಣೆ ಪೊಲೀಸರು ಕ್ರಮವನ್ನ ತೆಗೆದುಕೊಂಡಿದ್ದಾರೆ.