Posts Slider

Karnataka Voice

Latest Kannada News

ಪಿಂಜಾರ ಅಭಿವೃದ್ದಿ ನಿಗಮಕ್ಕಾಗಿ ಉಗ್ರ ಹೋರಾಟಕ್ಕೆ ಸಿದ್ಧ: ಡಾ.ಅಬ್ದುಲರಜಾಕ

1 min read
Spread the love

ಧಾರವಾಡ: ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲರ ಮುಖಾಂತರ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ನೇತೃತ್ವದಲ್ಲಿ ಮನವಿಯನ್ನ ಸಲ್ಲಿಸಲಾಯಿತು.

ಮನವಿ ಸಲ್ಲಿಸುವ ಸಮಯದಲ್ಲಿ ಮಾತನಾಡಿದ ಡಾ.ಅಬ್ದುಲರಜಾಕ, ಸುಮಾರು 10 ವರ್ಷಗಳಿಂದ ಪಿಂಜಾರ ಸಮುದಾಯದಿಂದ ಹೋರಾಟ ಮಾಡುತ್ತಾ ಬಂದರು ನಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ. ಇತ್ತೀಚಿಗೆ ಮರಾಠ ಹಾಗೂ ಬಹುಸಂಖ್ಯಾತರ ವೀರಶೈವ ಲಿಂಗಾಯತ ನಿಗಮಕ್ಕೂ ಹೆಚ್ಚಿನ ಒತ್ತು ನೀಡಿದೆ. ಇದೇ ರೀತಿ ಪಿಂಜಾರ ಅಭಿವೃದ್ದಿ ನಿಗಮಕ್ಕೂ ಆದೇಶ ನೀಡಬೇಕು. ಇಲ್ಲದಿದ್ದರೇ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತೆ ಎಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲರಝಾಕ ನದಾಫ ಹೇಳಿದರು.

ಈ ಮೊದಲು ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪಿಂಜಾರ ಅಭಿವೃದ್ದಿ ನಿಗಮಕ್ಕೆ ಒತ್ತಾಯಿಸಿ ಮಾತನಾಡಿದರು. ಕರ್ನಾಟಕದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆಯ ಅರ್ಧದಷ್ಟು ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯವಿದ್ದು ಈವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ರಾಜ್ಯದ ಸುಮಾರು 70 ಲಕ್ಷ ಮುಸ್ಲಿಂ ಜನಸಂಖ್ಯೆಯ ಪೈಕಿ ಪಿಂಜಾರ್, ನದಾಫ್ (ಕರ್ನಾಟಕ ಆಂದ್ರಗಡಿ ಜಿಲ್ಲೆಯಲ್ಲಿ ದುದೇಕುಲಾ ಹಾಗೂ ಕರ್ನಾಟಕ ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಮನ್ಸೂರಿ ಜನಾಂಗ ಅಂತಾ ವಾಸವಿದ್ದು) ಈ ಎಲ್ಲ ಜನಾಂಗವು ಪಿಂಜಾರ್, ನದಾಫ ಸಮುದಾಯಕ್ಕೆ ಸೇರಿದ ಜನಸಂಖ್ಯೆ ಆಗಿದೆ ಪಿಂಜಾರ್, ನದಾಫ, ಜನಸಂಖ್ಯೆಯು ಸರಿ ಸುಮಾರು 35 ರಿಂದ 38 ಲಕ್ಷದಷ್ಟು ಇರುತ್ತಾರೆ ಎಂದು ಹೇಳಿದರು.

ನಮ್ಮ ಅಲೆಮಾರಿ ಪಿಂಜಾರ್, ನದಾಫ್, ಜನಸಂಖ್ಯೆಗೆ ಸದ್ಯ ಪ್ರ ವರ್ಗ 1 ಕ್ಕೆ ಮೀಸಲಾತಿ ಸೌಲಬ್ಯಗಳು ರಾಜ್ಯದಲ್ಲಿ ಎಲ್ಲ ಜಿಲ್ಲೆಯಲ್ಲಿ ಸಿಗುತ್ತಿಲ್ಲ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಈ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗವು 2010 ರಲ್ಲಿ ಡಾ.ಸಿ.ಎಸ್. ದ್ವಾರಕನಾಥ ರವರು ಸಲ್ಲಿಸಿದ ವರದಿಯಲ್ಲಿ ತೆರೆದಿಟ್ಟಿದೆ ಎಂದು ವಿವರಿಸಿದರು.

ಪಿಂಜಾರ/ನದಾಫ್ ಸಮುದಾಯದ ಉಳಿವು ಮತ್ತು ಬೆಳವಣಿಗೆಗೆ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. 2009-10 ರಲ್ಲಿ ಡಾ. ಸಿ.ಎಸ್. ದ್ವಾರಕನಾಥ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ವರದಿಯಲ್ಲಿ ಅಲೆಮಾರಿ ಪಿಂಜಾರ್, ನದಾಫ್, ಜನರ ಉದ್ಯೋಗವು ನಸೀಶಿ ಹೋಗಿದ್ದು ಈ ಸಮುದಾಯವು ತುಂಬಾ ಸಂಕಷ್ಟದಲ್ಲಿ ಇದೆ ಎಂದು ಅಲೆಮಾರಿ ಸಮುದಾಯಕ್ಕೆ ಪಿಂಜಾರ್ ಅಭಿರುದ್ದಿ ನಿಗಮ ಮಾಡಬೇಕು ದ್ವಾರಕನಾಥ ಅವರು ಸಲ್ಲಿಸಿದ್ದ ವರದಿ ಆಧರಿಸಿ ಈಗಾಗಲೇ ವಿಶ್ವಕರ್ಮ, ಲಂಬಾಣಿ, ಭೋವಿ, ಉಪ್ಪಾರ, ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲೆಮಾರಿ ಪಿಂಜಾರ್, ನದಾಫ್ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ನೆರೆಯ ಆಂದ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಪಿಂಜಾರ್, ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮರಾಠ ನಿಗಮ ಮಂಡಳಿ ಹಾಗೂ ಬಹುಸಂಖ್ಯಾತರ ವರ್ಗದ ವೀರಶೈವ ಲಿಂಗಾಯತ ನಿಗಮ ಮಂಡಳಿ ಮಾಡಲು ಆದೇಶವನ್ನು ನೀಡಿರುವುದರಿಂದ ಸುಮಾರು 10 ವರ್ಷಗಳಿಂದ ಅಂದರೆ ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರಾದ ತಾವು 2009 ರಲ್ಲಿ ಮುಖ್ಯಮಂತಿಗಳಿದ್ದ ಅವಧಿಯಿಂದ ಪಿಂಜಾರ ಅಭಿವೃದ್ದಿ ನಿಗಮಕ್ಕೆ ಹೋರಾಟ ಮಾಡುತ್ತಾ ಬಂದರು ಸಹ ಇಲ್ಲಿಯವರಿಗೂ ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿರುವುದಾದರೂ ಏಕೆ ? ಇದನ್ನು ನಮ್ಮ ಸಮುದಾಯದಿಂದ ತೀವೃವಾಗಿ ಖಂಡಿಸುತ್ತೇವೆಂದು ಹೇಳಿದರು.

ಈ ಹಿಂದೆಯೂ ನಮ್ಮ ಸಮುದಾಯಕ್ಕೆ ಕಟ್ಟಡ, ಸಭಾಭವನಕ್ಕೆ ಕೋಟಿ, ಕೋಟಿ ಅನುದಾನ ಒದಗಿಸುತ್ತಾ ಬಂದಿರುವುದು ಸ್ವಾಗಾರ್ತಹ ವಿಷಯ ಆದರೆ ನಮ್ಮ ಅಲೆಮಾರಿ ಜನಾಂಗವು ಅನಕ್ಷರಸ್ಥರಾಗಿದ್ದರಿಂದ ಕುಟುಂಬ ನಿರ್ವಹಣೆ ತೊಂದರೆಯಾಗಿದೆ. ಕುಲಕಸಬು ನಸಿಶಿ ಹೋಗಿದೆ. ನೀವು ನೀಡಿದ ಅನುದಾನ ಸರಿಯಾಗಿ ಸಮರ್ಪಕವಾಗಿ ತಲುಪುವುದಿಲ್ಲ. ಆದ್ದರಿಂದ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಸರಕಾರದಿಂದ ನೀಡುವ ಅನುದಾನವನ್ನು ಅರ್ಥ ಪೂರ್ಣವಾಗಿ ಸಮುದಾಯದ ಪ್ರತಿ ಕುಟುಂಬಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ. ಪಿಂಜಾರ ಅಭಿವೃದ್ದಿ ನಿಗಮದಿಂದ ಸಮುದಾಯದ ಆರ್ಥಿಕ ಪರಿಸ್ಥಿತಿ ಸುದಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಅಧ್ಯಕ್ಷ  ಮಹಮ್ಮದ್ ಗೌಸ್ ಪಿಂಜಾರ್, ನಬಿಸಾಬ್ ನದಾಫ್,ನ್ಯಾಯವಾದಿ ಬಿ. ಕೆ ನದಾಫ್, ಎಂ ಕೆ ನದಾಫ್ ಶ್ರೀಮತಿ ಬಸೀರಾ ತೀರ್ಲಾಪುರ, ಮಹಮ್ಮದ್ ಶರೀಪ್ ನದಾಫ್, ಗೌಸಸಾಬ್ ಡಿ ನದಾಫ್, ಶಕೀಲ್ ಗೊರವನಕೊಳ್ಳ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಜರತಸಾಬ್ ನದಾಫ್, ನಾಹೀಮ್ ನದಾಫ್, ಅನ್ವರ್ ನದಾಫ್, ಜಾವಿದ್ ನದಾಫ್ ರಾಜು ಕೊಣ್ಣೂರ್ ಇತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *