ಕೊಲೆ ನಡೆದ ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ: ಸಿಕ್ಕ ಮಹತ್ವದ ಸುಳಿವೇನು ಗೊತ್ತಾ..?
1 min readಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ಕೊಲೆ ನಡೆದಿರುವ ಅಂಚಟಗೇರಿ ಬಳಿಯ ಚೆನ್ನಾಪುರ ರಸ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಭೇಟಿ ನೀಡಿ, ಸಮಗ್ರವಾದ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ ಪಟ್ಟಣದ ಜಗದೀಶ ಕೊಲ್ಲಾಪುರ ಎಂಬ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ ಘಟನೆ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಮಾವನ ಮನೆಗೆ ಬಂದಿದ್ದ ಜಗದೀಶ, ಆ ರಸ್ತೆಯಲ್ಲಿ ಯಾವ ಕೆಲಸಕ್ಕೆ ಹೋಗಿದ್ದನೆಂಬುದರ ಬಗ್ಗೆಯೂ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಚೆನ್ನಾಪುರ ರಸ್ತೆಯಲ್ಲಿರುವ ನೀಲಗಿರಿ ತೋಪು ಸೇರಿದಂತೆ ಅಂಚಟಗೇರಿಯ ಕೆಲವೆಡೆ ಜೂಜಾಟ ನಡೆಯುತ್ತಿದ್ದು, ಅದನ್ನ ತಡೆಯಲು ಪೊಲೀಸರು ಈಗಾಗಲೇ ಸಾಕಷ್ಟು ಕ್ರಮವನ್ನ ತೆಗೆದುಕೊಂಡಿದ್ದಾರೆ. ಆದರೆ, ಈ ಕೊಲೆಗೂ ಜೂಜಾಟಕ್ಕೂ ಸಂಬಂಧವಿದೇಯಾ ಎಂಬುದರ ಬಗ್ಗೆಯೂ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಡಿವೈಎಸ್ಪಿ ರವಿ ನಾಯಕ, ಇನ್ಸಪೆಕ್ಟರ್ ರಮೇಶ ಗೋಕಾಕ ಜೊತೆಗೂಡಿ ಭೇಟಿ ನೀಡಿ ತನಿಖೆಯನ್ನ ಕೈಗೊಂಡರು. ಈ ಸಮಯದಲ್ಲಿ ಕೊಲೆಗೆ ಬಳಕೆಯಾದ ಕಲ್ಲು ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗಿದೆ. ಈ ಸಮಯದಲ್ಲಿ ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ.