ಆರೂಢರ ಕಾಣಿಕೆ ಕುಡುಕರ ಪಾಲು..!
ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ದ್ವಾರ ಬಾಗಿಲಿನ ಕೀಲಿ ಮುರಿದು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶ್ರೀ ದೇವಸ್ಥಾನವನ್ನ ಬೆಳಿಗ್ಗೆ ಐದು ಗಂಟೆಗೆ ಎದ್ದು ನೋಡಿದಾಗ ಕೀಲಿ ಮುರಿದು ಒಳನುಗ್ಗಿರುವುದು ಗೊತ್ತಾಗಿದೆ. ಮಠದಲ್ಲಿದ್ದ ಕಾಣಿಕೆ ಪೆಟ್ಟಿಗೆಯನ್ನ ಕಳ್ಳರು ತೆಗೆದುಕೊಂಡು ಹೋಗಿದ್ದು, ಅದರಲ್ಲಿ ಸಾವಿರಾರೂ ರೂಪಾಯಿಗಳಿದ್ದವೆಂದು ಹೇಳಲಾಗಿದೆ.
ಶ್ರೀ ಸಿದ್ಧಾರೂಢ ಮಠದಲ್ಲಿ ಕಳೆದ ಎರಡು ವರ್ಷದ ಹಿಂದೆಯೂ ಕಳ್ಳತನ ನಡೆದಿತ್ತು. ಆಗಲೂ ಇದೇ ರೀತಿ ಕಾಣಿಕೆ ಪೆಟ್ಟಿಗೆಯನ್ನ ತೆಗೆದುಕೊಂಡು ಪರಾರಿಯಾಗಿದ್ದರು.
ಈಗ ಮತ್ತೆ ಅಂತಹದೇ ಪ್ರಕರಣ ನಡೆದಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.
ಶ್ರೀ ಸಿದ್ದಾರೂಢ ಮಠದಲ್ಲಿ ಎಲ್ಲರಿಗೂ ಬರಲು ಅವಕಾಶವಿದೆ. ಹೀಗಾಗಿ ಕುಡುಕರು ಕಳ್ಳತನ ಮಾಡಿರಬಹುದೆಂದು ಶ್ರೀ ಮಠದ ಸಿದ್ದೇಶ್ವರ ಪೂಜಾರ ಹೇಳಿದ್ದಾರೆ.
ಮಠದಲ್ಲಿ ನಡೆದಿರುವ ಕಳ್ಳತನ ನಡೆದಿರುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ನೀಡಿರುವ ಅವರು, ಪೊಲೀಸರು ಈ ಬಗ್ಗೆ ಆರೋಪಿಗಳನ್ನ ಪತ್ತೆ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.