“ಗಲ್ಲೆ” ಒಡೆದು ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಿಸಿದ ಪುಠಾಣಿಗಳು..!
ಧಾರವಾಡ: ಅಪ್ಪ ಮನೆಯಿಂದ ಹೊರಗೆ ಹೋಗಿ ಒಳ ಬಂದ ಮೇಲೆ ಮಕ್ಕಳಿಗೆ ಕೊಡುತ್ತಿದ್ದ ಚಿಲ್ಲರೇ ಹಣವನ್ನ ಕೂಡಿಸಿ, ಆಟದ ಸಾಮಾನುಗಳನ್ನ ತೆಗೆದುಕೊಳ್ಳಬೇಕೆಂದು ಕನಸು ಕಾಣುತ್ತಿದ್ದ ಮಕ್ಕಳು, ಅದನ್ನೆಲ್ಲ ಶ್ರೀರಾಮ ಮಂದಿರ ಸಮರ್ಪಣಾ ನಿಧಿಗೆ ನೀಡಿದ ಘಟನೆಯೊಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆನಕನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಆಂಜನೇಯ ವಲಮೇಶ ತಳವಾರ ಎಂಬ ಬಾಲಕ ನಿಧಿಗೆ ತಾನೂ ಕೂಡಿಟ್ಟ 265 ರೂಪಾಯಿಗಳನ್ನ ನೀಡಿದರೇ, ಮನೋಜ ಹನಮಂತ ಶಿವಳ್ಳಿ 128 ರೂಪಾಯಿಗಳನ್ನ ನೀಡಿ, ಧನ್ಯತಾ ಭಾವವನ್ನ ಪಾಲಕರು ಅನುಭವಿಸುವಂತಾಗಿದೆ.
ಕಳೆದ ಒಂದು ವರ್ಷದಿಂದ ಅಪ್ಪ ಅಮ್ಮ ಸೇರಿದಂತೆ ಪೋಷಕರು ನೀಡಿದ್ದ ಹಣವನ್ನು ಹುಂಡಿಯಲ್ಲಿ ಸಂಗ್ರಹಿಸಿದ್ದ ಪುಟ್ಟ ಮಕ್ಕಳು ಮನೆಯಲ್ಲಿ ಅವರ ತಂದೆ ದೇಣಿಗೆ ನೀಡುವುದನ್ನು ನೋಡಿ ತಾವು ಸಂಗ್ರಹಿಸಿಟ್ಟ ಹುಂಡಿಯ ಹಣವನ್ನು ಶ್ರೀ ರಾಮ ಮಂದಿರಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದರು.
ಮಕ್ಕಳಲ್ಲಿನ ನಿಷ್ಕಲ್ಮಶ ಪ್ರೀತಿಯ ಗೌರವವನ್ನ ನಿಧಿ ಸಂಗ್ರಹಿಸಲು ಬಂದಿದ್ದ ಯುವಕರು ಮನಸಾರೆ ಕೊಂಡಾಡಿದರು. ಇದು ಭಾರತ.. ಇಲ್ಲಿನ ಮನಸ್ಸುಗಳು ಹಾಗೇ ಎನ್ನೋದಕ್ಕೆ ಈ ಪುಠಾಣಿಗಳು ಮತ್ತಷ್ಟು ಸಾಕ್ಷಿಗಳಾದರು.