ಧಾರವಾಡ: ಅಪಹರಿಸಿ ಕೊಲೆ ಯತ್ನ- ಠಾಣೆಗೆ ತಾನೇ ಬಂದು ಕಥೆ ಕಟ್ಟಿದ್ದ “ಆರೋಪಿ”- ನಾಲ್ಕು ಬಿದ್ದ ಮೇಲೆ ಸತ್ಯ ಒಪ್ಪಿಕೊಂಡ… Big Exclusive..
1 min readಧಾರವಾಡ: ಕೆಲಸವಿದೆ ಎಂದು ಹೋಗಿದ್ದ ವ್ಯಕ್ತಿಯನ್ನ ಅಪಹರಣ ಮಾಡಿ, ಹಣಕ್ಕೆ ಬೇಡಿಕೆಯಿಟ್ಟ ಘಟನೆ ನಡೆದಿದ್ದು, ಸ್ಥಳ ಪತ್ತೆ ಹಚ್ಚುವ ಪೂರ್ವದಲ್ಲೇ ಆರೋಪಿಯು ಠಾಣೆಗೆ ಬಂದು ಬೇರೆಯದ್ದೆ ಕಥೆ ಕಟ್ಟಿದ್ದನ್ನ, ಪೊಲೀಸರು ನಂಬದೇ ಸತ್ಯವನ್ನ ಹೊರ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಮದಿಹಾಳದ ವಿಜಯಕುಮಾರ ನಿಂಗಯ್ಯ ಮದಾರಿಮಠ ಎಂಬ ವ್ಯಕ್ತಿಯು ಮನೆಯಿಂದ ಹೊರಗೆ ಹೋದ ಸಮಯದಲ್ಲಿ ರಾತ್ರಿ ಒಂದು ಗಂಟೆಗೆ, ‘ಬೇಗನೇ 25000 ಕಳಿಸು. ಇಲ್ಲದಿದ್ದರೇ ನನ್ನ ಕೊಲೆ ಮಾಡ್ತಾರೆ’ ಎಂದು ಮಗನಿಗೆ ಮೊಬೈಲ್‌ನಲ್ಲಿ ಹೇಳುತ್ತಿದ್ದಾಗಲೇ ಪಕ್ಕದಲ್ಲಿದ್ದವ ಮೊಬೈಲ್ ಕಸಿದುಕೊಂಡು 30ಸಾವಿರ ತೆಗೆದುಕೊಂಡು ಬಾ ಎಂದು ಧಮಕಿ ಹಾಕಿದ್ದಾನೆಂದು ವಿಜಯಕುಮಾರ ಪುತ್ರ ಅಮರೇಶ ದೂರಿನಲ್ಲಿ ವಿವರಿಸಿದ್ದಾನೆ.
ತಕ್ಷಣವೇ ಟೌನ್ ಠಾಣೆ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಘಟನೆಯ ಬೆನ್ನು ಬಿದ್ದಾಗ, ಲೋಕೇಷನ್ ಕೆಎಂಎಫ್ ಹತ್ತಿರ ತೋರಿಸಿದೆ. ಪ್ರಕರಣದ ತನಿಖೆಯಲ್ಲಿ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಕೂಡಾ ಭಾಗಿಯಾಗಿ, ವಿಜಯಕುಮಾರನನ್ನ ಪತ್ತೆ ಹಚ್ಚಿದ್ದಾರೆ. ತೀವ್ರವಾದ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಆರೋಪಿ ಮನೋಜ ಕ್ಯಾರಕಟ್ಟಿ ಎಂಬಾತ ವಿಜಯಕುಮಾರ ಅಪಹರಣದ ಹಿಂದೆ ಬೇರೆಯವರ ಕೈವಾಡವಿದೆ ಎಂದು ಕಥೆ ಕಟ್ಟಲು ಮುಂದಾಗಿದ್ದಾನೆ. ಈತನನ್ನ ಸೂಕ್ಷ್ಮವಾಗಿ ಗಮನಿಸಿದ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ‘ಪೊಲೀಸ್ ಕೈ’ ತೋರಿಸಿದ್ದಾರೆ. ಆಗ ಆರೋಪಿ ನಡೆದಿರುವ ಸತ್ಯ ಬಿಚ್ಚಿಟ್ಟಿದ್ದಾನೆ.
ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.