ಶಿಕ್ಷಕ ಶ್ಯಾಮ ಮಲ್ಲನಗೌಡರ ಪುತ್ರ ಸಾಯಿಕಿರಣ ಅಪಘಾತದಲ್ಲಿ ಸಾವು: ಧಾರವಾಡದಲ್ಲಿ ನಾಳೆ ಅಂತ್ಯಕ್ರಿಯೆ…

ಧಾರವಾಡ: ಕೋರ್ಟ್ ಸರ್ಕಲ್ ಬಳಿಯ ಬೋವಿಗಲ್ಲಿ ನಿವಾಸಿ ಸಾಯಿಕಿರಣ (ಆದರ್ಶ) ಶ್ಯಾಮ್ ಮಲ್ಲನಗೌಡರ ನಿನ್ನೆ ಶುಕ್ರವಾರ ರಾತ್ರಿ ಮೈಸೂರಿನಲ್ಲಿ ನಿಧನರಾದರು
ಇವರು ಮೈಸೂರಿನ L & T ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಧಾರವಾಡದ ಸೇಂಟ್ ಜೋಸೆಫ್ ಹೈಸ್ಕೂಲ್ ನಲ್ಲಿ ಸಮಾಜ ವಿಜ್ನಾನ ವಿಷಯದ ಹಿರಿಯ ಶಿಕ್ಷಕ ಶ್ಯಾಮ್ ಮಲ್ಲನಗೌಡರ ಅವರ ಪುತ್ರರಾಗಿದ್ದಾರೆ.
ಮೃತರು ತಂದೆ ತಾಯಿ ಮತ್ತು ಒಬ್ಬ ತಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಾಳೆ ರವಿವಾರ ಬೆಳಿಗ್ಗೆ 8 ಗಂಟೆಗೆ ಧಾರವಾಡದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ