ಸಾರ್ವಜನಿಕರ ಜೊತೆ ಸ್ಪಂದನೆ ಕೊರತೆ: ಪಿಎಸ್ಐ ಬಸವರಾಜ ಸಸ್ಪೆಂಡ್…!!!

ದೂರು ಕೊಟ್ಟರೂ ಪ್ರಕರಣ ದಾಖಲಿಸುವುಲ್ಲಿ ಹಿನ್ನೆಡೆ
ಸಾರ್ವಜನಿಕರಿಗೆ ಸ್ಪಂದನೆ ಕೊರತೆ
ಬೀದರ: ಮೇಲಾಧಿಕಾರಿಗಳ ಸಲಹೆಗಳನ್ನ ಪಾಲನೆ ಮಾಡದೇ ಇರುವುದನ್ನ ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿಯವರು ನೀಡಿದ ವರದಿ ಆಧರಿಸಿ ಕಲಬುರ್ಗಿ ವಲಯ ಐಜಿಪಿ ಅಜಯ್ ಹಿಲೋರಿ ಅವರು ಪಿಎಸ್ಐ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಚಿಟಗುಪ್ಪ ತಾಲೂಕಿನ ಮನ್ನಾಏಖ್ಖೇಳಿ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಚಿತ್ತಕೋಟಿ ಅವರೇ ಅಮಾನತ್ತಾದ ಅಧಿಕಾರಿಯಾಗಿದ್ದಾರೆ.
ಪಿಎಸ್ಐ ಬಸವರಾಜ ಚಿತ್ತಕೋಟಿ ಅವರು ಕರ್ತವ್ಯ ಲೋಪ, ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ನೀಡದಿರುವುದು, ಮೇಲಾಧಿಕಾರಿಗಳ ಸಲಹೆಗಳು ಪಾಲನೆ ಮಾಡದಿರುವುದು, ಸಾರ್ವಜನಿಕರು ದೂರು ಕೊಟ್ಟರೂ ಪ್ರಕರಣ ದಾಖಲಿಸುವಲ್ಲಿ ಹಿನ್ನಡೆ ಸೇರಿದಂತೆ ವಿವಿಧ ಕಾರಣಗಳ ಹಿನ್ನೆಲೆ ಅಮಾನತ್ತು ಮಾಡಲಾಗಿದೆ.