ಖ್ಯಾತ ಸಾಹಿತಿ ಕೆ.ಕಲ್ಯಾಣ ಬಾಳಲಿ ವಿರಹ ಗೀತೆಗೆ ಕಾರಣವಾಗಿದ್ದ ಗಂಗಾ ಇನ್ನಿಲ್ಲ- ಆವರಣದಲ್ಲೇ ಏನು ಮಾಡಿಕೊಂಡ್ಲು ಗೊತ್ತಾ..?
ಕೊಪ್ಪಳ: ಖ್ಯಾತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಕೆ.ಕಲ್ಯಾಣ ದಂಪತಿಗಳಲ್ಲಿ ವಿರಸಕ್ಕೆ ಕಾರಣವಾಗಿದ್ದ ಗಂಗಾ ಎಂಬಾಕೆ, ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸುವುದಾಗಿ ಸಂತೋಷ ಕುಲಕರ್ಣಿ ಎಂಬಾತನಿಂದ ಮೂರು ಲಕ್ಷ ರೂಪಾಯಿ ಪಡೆದಿದ್ದ ಗಂಗಾ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ವಿಚಾರಣೆಗಾಗಿ ಗಂಗಾ ಇಂದು ಬಂದಾಗ, ಆವರಣದಲ್ಲೇ ವಿಷ ಸೇವಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿಲಾಯಿತಾದರೂ, ಚಿಕಿತ್ಸೆ ಫಲಿಸದೇ ಗಂಗಾ ತೀರಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಕೆ.ಕಲ್ಯಾಣ ದಂಪತಿಗಳಲ್ಲಿ ಬಿರುಕು ಉಂಟಾಗಿತ್ತು. ಇದಕ್ಕೇಲ್ಲ ಗಂಗಾ ಎಂಬ ಮಹಿಳೆಯೇ ಕಾರಣ ಎಂದು ಕೆ.ಕಲ್ಯಾಣ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದೇ ಘಟನೆಯಲ್ಲಿ ಪೂಜೆ ಮಾಡುವ ನೆಪದಲ್ಲಿ ವಾಲಿ ಎಂಬಾತ ಕೂಡಾ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.
 
                       
                       
                       
                       
                      
 
                        

 
                 
                 
                