ಸಂಕ್ರಾಂತಿ ಮರೆತು ಫೀಲ್ಡಿಗಿಳಿದ ಪೊಲೀಸ್ ಕಮೀಷನರ್: ಅವಳಿನಗರದಲ್ಲಿ ಮಿಂಚಿನ ಸಂಚಾರ
1 min readಹುಬ್ಬಳ್ಳಿ: ಧಾರವಾಡ- ಹುಬ್ಬಳ್ಳಿ ಬೆಳೆಯುತ್ತಿರುವ ಅವಳಿನಗರ. ಇದರ ಜೊತೆಗೆ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ಕೂಡಾ ಬೆಳೆಯುತ್ತಲೇ ಇದೆ. ಪ್ರಮುಖ ಪ್ರದೇಶಗಳಲ್ಲಿ ಪ್ರತಿದಿನವೂ ತೊಂದರೆ ಹೆಚ್ಚಾಗುತ್ತಿರುವ ಕಾರಣದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಇಂದು ಸಂಕ್ರಾಂತಿಯನ್ನ ಮರೆತು ಬೆಳ್ಳಂಬೆಳಿಗ್ಗೆ ಫೀಲ್ಡಿಗಿಳಿದಿದ್ದರು.
ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಖುದ್ದು ಪೊಲೀಸ್ ಕಮೀಷನರ್ ಲಾಬುರಾಮ್ ಅವರೇ ಫೀಲ್ಡ್ ಗೇ ಇಳಿದರು. ಬೆಳ್ಳಂಬೆಳಗ್ಗೆ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಆಗತ್ತೋ ಅಲ್ಲಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಯಾವ ರೀತಿಯಾಗಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳದಲ್ಲಿ ಪಾಲಿಕೆಯ ಅಧಿಕಾರಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆ ನಡೆಸಿದರು..
ಮುಖ್ಯವಾಗಿ ಸಂಜೆ ಸಮಯದಲ್ಲಿ ಬಂಕಾಪುರ ಚೌಕ್ ನಿಂದ ಟ್ರಾಫಿಕ್ ಜಾಮ್ ಆದ್ರೆ, ಚೆನ್ನಮ್ಮ ಸರ್ಕಲ್ ವರೆಗೂ ಟ್ರಾಫಿಕ್ ಜಾಮ್ ಆಗಿಬಿಡತ್ತೆ, ಇದನ್ನು ನಿವಾರಿಸಲು ಟ್ರಾಫಿಕ್ ಪೊಲೀಸರು ಕೂಡಾ ನಿಯಂತ್ರಣ ಮಾಡಲು ಹರಸಾಹಸ ಪಡುವಂತಾಗಿದೆ.
ಬೆಳ್ಳಂಬೆಳಗ್ಗೆ ಕಮೀಷನರ್ ಲಾಬುರಾಮ್ ಅವರಿಗೆ ಡಿಸಿಪಿ ಬಸರಗಿ, ಟ್ರಾಫಿಕ್ ಇನ್ಸ್ಪೆಕ್ಟರ್ ಗಳಾದ ತೋಟಗಿ, ಕಾಡದೇವರಮಠ, ಹೊಸಪೇಟ್, ಹಾಗೂ ಪಾಲಿಕೆಯ ಕಮೀಷನರ್ ಸುರೇಶ ಹಿಟ್ನಾಳ್ ಕೂಡಾ ಸಾಥ್ ನೀಡಿದರು. ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರವನ್ನು ಕೊಡುವ ನಿಟ್ಟಿನಲ್ಲಿ ಕಮೀಷನರ್ ಸಾಹೇಬ್ರು ಫೀಲ್ಡ್ ಗೇ ಇಳಿದಿದ್ದು ಸಾರ್ವಜನಿಕರಿಗೆ ಖುಷಿ ಕೊಡುವ ಸಂಗತಿಯಾಗಿದೆ.
ಧಾರವಾಡದಲ್ಲೂ ಕಮೀಷನರ್ ಪರಿಶೀಲನೆ ನಡೆಸಿದರು. ಡಿಸಿಪಿ ರಾಮರಾಜನ್ ಹಾಗೂ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಉಪಸ್ಥಿತರಿದ್ದರು.