ಹುಬ್ಬಳ್ಳಿಯಲ್ಲಿ ನಾಳೆಯಿಂದ “ಸ್ವದೇಶ ಮೇಳ”- ಸಂಯೋಜಕ ಜಯತೀರ್ಥ ಕಟ್ಟಿ…

ಹುಬ್ಬಳ್ಳಿ: ಸಾರ್ವಜನಿಕರಿಗೆ ಸ್ವದೇಶಿ ಉತ್ಪನ್ನಗಳನ್ನ ಪರಿಚಯಿಸುವ ಜೊತೆಗೆ ಅಗತ್ಯತೆಯ ಕುರಿತು ತಿಳಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಫೆಬ್ರುವರಿ 5ರಿಂದ 9ರ ವರೆಗೆ ಸ್ವದೇಶ ಮೇಳವನ್ನ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಸಂಯೋಜಕರಾದ ಜಯತೀರ್ಥ ಕಟ್ಟಿ ತಿಳಿಸಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಸ್ವದೇಶಿ ಮೇಳದಲ್ಲಿ ಭಾಗವಹಿಸುವ ಮೂಲಕ ಉತ್ಪನ್ನಗಳ ಕುರಿತು ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಈ ಮೂಲಕ ದೇಶದ ಸ್ವಾವಲಂಬನೆಯನ್ನ ಇಮ್ಮಡಿಸುವುದಕ್ಕೆ ಮುಂದಾಗಬೇಕಿದೆ ಎಂದು ಕಟ್ಟಿ ಅವರು ಹೇಳಿದರು.