Posts Slider

Karnataka Voice

Latest Kannada News

ಹುಬ್ಬಳ್ಳಿ ಐದು ಜನ ಸಿದ್ಧಾಪುರದ ಬಳಿ ಸಾವು: ಪಾಲ್ಸ್ ನೋಡಲು ಹೋದವರ ಕಾರು ಹಳ್ಳದಲ್ಲಿ..

1 min read
Spread the love

ಉತ್ತರಕನ್ನಡ: ಉಂಚಳ್ಳಿ ಫಾಲ್ಸ್ ನೋಡಲು ಕಾರಿನಲ್ಲಿ ಹೋಗಿದ್ದ ಐದು ಜನರು ದುರ್ಮರಣಕ್ಕೀಡಾದ ಘಟನೆ ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಕೋಡನಮನೆ ಬಳಿಯ ಹಳ್ಳದಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಉಂಚಳ್ಳಿ ಪಾಲ್ಸ್ ನೋಡಿಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ ಕೆಲವೇ ನಿಮಿಷಗಳ ಹಿಂದೆ ಕಾರು ಕಂಡು, ಪ್ರಕರಣ ಬೆಳಕಿಗೆ ಬಂದಿದೆ.

ಕಾರಿನಲ್ಲಿ ಒಟ್ಟು ಐದು ಜನರಿದ್ದರೆಂದು ಹೇಳಲಾಗಿದ್ದು ಅದರಲ್ಲಿ ಮೂವರ ಶವಗಳನ್ನ ಹೊರಗೆ ತೆಗೆಯಲಾಗಿದೆ. ಮೃತರನ್ನ ಅಕ್ಷತಾ, ನಿಶ್ಚಲ್, ಸುಷ್ಮಾ, ರೋಶನ್ ಎಂದು ಹೇಳಲಾಗಿದ್ದು, ಇನ್ನುಳಿದವರ ಶವಕ್ಕಾಗಿ ಹುಡುಕಾಟ ನಡೆದಿದೆ.

ಕಾರು ಹುಬ್ಬಳ್ಳಿಗೆ ಸೇರಿದ್ದು ಎನ್ನಲಾಗಿದ್ದು, ಕಾರು ರಾತ್ರಿಯೇ ಹಳ್ಳದಲ್ಲಿ ಬಿದ್ದಿರಬಹುದೆಂಬ ಶಂಕೆಯಿದೆ. ಯಾರೂ ನೋಡದ ಕಾರಣ ಈಗ ಕೆಲವು ನಿಮಿಷಗಳ ಹಿಂದೆ ಗೊತ್ತಾಗಿದೆ.

ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಜಿ ಟಿ ನಾಯ್ಕ ಹಾಗೂ ಸಿದ್ದಾಪುರ ಠಾಣೆ‌ ಪೊಲೀಸರ ಭೇಟಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾರಿನಲ್ಲಿ ಐವರಿದ್ದರೋ ಅಥವಾ ಆರು ಜನರಿದ್ದರೋ ಎಂಬುದು ಗೊಂದಲವುಂಟಾಗಿದೆ.


Spread the love

Leave a Reply

Your email address will not be published. Required fields are marked *