Posts Slider

Karnataka Voice

Latest Kannada News

ಹುಬ್ಬಳ್ಳಿ ಇನ್ ಕಂ ಟ್ಯಾಕ್ಸ್ ಕಚೇರಿಯಲ್ಲಿ ಬೆಂಕಿ

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯ ಬಳಿಯಿರುವ ಇನ್ ಕಂ ಟ್ಯಾಕ್ಸ್ ಕಚೇರಿಯ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆತಂಕ ಸೃಷ್ಟಿಯಾಗಿತ್ತು.

ಇಳಿಸಂಜೆ ಕಂಪ್ಯೂಟರ್ ಬಳಿ ಶಾಕ್ ಸರ್ಕೀಟ್ ಉಂಟಾಗಿ ಹೊತ್ತಿದ ಬೆಂಕಿ ಎಸಿಗೂ ವ್ಯಾಪಿಸಿದ್ದರಿಂದ ಅವಘಡ ಹೆಚ್ಚಾಗುತ್ತಿದ್ದಂತೆ ಅಗ್ನಿಶಾಮಕ ದಳ ತಕ್ಷಣವೇ ಸ್ಥಳಕ್ಕೆ ಆಗಮಿಸಿದರು.

ದಟ್ಟವಾದ ಹೊಗೆ ಆವರಿಸಿದ್ದರಿಂದ ಕೆಲಕಾಲ ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುವಂತಾಯಿತು. ಬೆಂಕಿಯಿಂದ ಕೆಲವು ಕಂಪ್ಯೂಟರ್ ಗಳು ಆಹುತಿಯಾಗಿದ್ದು, ಅದರಲ್ಲಿ ಯಾವ್ಯಾವ ಡಾಟಾಗಳು ಇದ್ದವು ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೆಲಕಾಲದ ನಂತರ ಬೆಂಕಿಯನ್ನ ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.


Spread the love

Leave a Reply

Your email address will not be published. Required fields are marked *