Posts Slider

Karnataka Voice

Latest Kannada News

ರಾಜ್ಯಾಧ್ಯಕ್ಷ ಅಶೋಕ ಸಜ್ಜನ- ಕಲಬುರಗಿಯಲ್ಲಿ ಸತ್ಕಾರ

1 min read
Spread the love

ಕಲಬುರಗಿ: ಶಿಕ್ಷಕರ ಸಮಸ್ಯೆಗಳ ಕುರಿತಂತೆ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕಕ್ಕೆ ಭೇಟಿ ನೀಡಿದ್ದ ಕರ್ನಾಟಕ ಸರಕಾರಿ  ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರನ್ನಕಲಬುರಗಿ ಶಿಕ್ಷಕರು ಸತ್ಕರಿಸಿದರು.

ಸಾಂದರ್ಭಿಕ ವಾಗಿ ಕಲಬುರ್ಗಿಗೆ ಭೇಟಿ ನೀಡಿದ ಸಮಯದಲ್ಲಿ  ಕಲಬುರಗಿ ಜಿಲ್ಲೆಯ ಕರ್ನಾಟಕ ಸರಕಾರಿ  ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಹೊನ್ನಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ   ಶಿವರಾಜ ಪತ್ತಾರ, ಶಾಂತು ಎಸ್ ಸಜ್ಜನ, ರಾಜ್ಯ ಘಟಕದ ಉಪಾಧ್ಯಕ್ಷ  ಮಹ್ಮದರಫಿ ಈ ಸಮಯದಲ್ಲಿ ಉಪಸ್ಥಿತರಿದ್ದರು.

ಇದೇ ಸಮಯದದಲ್ಲಿ ಸಭೆಯನ್ನ ನಡೆಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗಿದ್ದು, ವಿಷಯಗಳು ಕೆಳಗಿನಂತಿವೆ..

  1. ಶೀಘ್ರದಲ್ಲೇ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವ ಬಗ್ಗೆ.
  2. ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ GLPS ಸಮಖೇಡ ತಾಂಡಾ ಶಾಲೆಯು 3 ಬಾರಿ ಮಳೆಯ ನೀರು ಬಂದು ಸಂಪೂರ್ಣವಾಗಿ ಮಳೆನೀರಿನಿಂದ ಮುಳುಗಡೆಯಾದ ಬಗ್ಗೆ  ಮಕ್ಕಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ BEO &DDPI, DC ರವರ ಗಮನಕ್ಕೆ ತರಲಾಯಿತು .ತಕ್ಷಣವೇ ಕಾರ್ಯರೂಪಕ್ಕೆ ಬಂದರು.
  3. ಮುಂದೆ ನಡೆಯುವ ಚುನಾವಣಾ ಕರ್ತವ್ಯಕ್ಕೆ ಹೋಗುವ ನಮ್ಮ ಶಿಕ್ಷಕರಿಗೆ ಗೌರವ ಭತ್ಯೆ ಹಾಗೂ ವಿಶೇಷ ರಜೆಗಳ (OOD) ಬಗ್ಗೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಚುನಾವಣಾ ಅಧಿಕಾರಗಳ ಗಮನ ತರುವ ಬಗ್ಗೆ ವಿಚಾರಿಸಲಾಯಿತು.

Spread the love

More Stories

Leave a Reply

Your email address will not be published. Required fields are marked *