ನೀರಲ್ಲಿ ಸಿಕ್ಕಿಕೊಂಡ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು : ಹೊರತೆಗೆಯಲು ಪ್ರಯತ್ನ
ಕಲಬುರಗಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಿಗೆ ತೆರಳುವಾಗ ನೀರಿನಲ್ಲಿ ಸಿಲುಕಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇವಣಿ ಬಳಿ ನಡೆದಿದೆ.
ಹಳ್ಳದ ನೀರಲ್ಲಿ ಸಿಲುಕಿರೋ ನರಸರಡ್ಡಿ ಮತ್ತು ಮಾರುತಿ ಎಂಬ ಅಧಿಕಾರಿಗಳೇ ನೀರನಲ್ಲಿ ಸಿಕುಕಿಕೊಂಡಿದ್ದು, ಇಬ್ಬರನ್ನೂ ಹೊರ ತೆಗೆಯಲು ಸಾರ್ವಜನಿಕರು ಪ್ರಯತ್ನ ಮಾಡುತ್ತಿದ್ದಾರೆ.
ದಂಡೋತಿ ಮತ್ತು ಮಲಕೋಡ್ ಗ್ರಾಪಂ ಗ್ರಾಮ ಲೆಕ್ಕಾಧಿಕಾರಿಗಳೇ ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದವರನ್ನ ರಕ್ಷಣೆ ಮಾಡಲಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಮಗಳಲ್ಲಿ ತೊಂದರೆಯಾಗಬಾರದೆಂದು ಅಧಿಕಾರಿಗಳು ಗ್ರಾಮಗಳಿಗೆ ತೆರಳುವಾಗ ಘಟನೆ ನಡೆದಿದೆ.