Posts Slider

Karnataka Voice

Latest Kannada News

ದಯವಿಟ್ಟು ಈ ಮಗುವಿಗೆ ಪಾಲಕರನ್ನ ಹುಡುಕಿಕೊಡಿ

1 min read
Spread the love

ಹುಬ್ಬಳ್ಳಿ: ಇಲ್ಲಿನ ಕರ್ಕಿಬಸವೇಶ್ವರ ದೇವಾಲಯ ಬಳಿ ಕಳೆದ ನವೆಂಬರ್ 3 ರಂದು ರುಕ್ಸಾನಾ ಎಂಬ ನಾಲ್ಕು ವರ್ಷದ ಬಾಲಕಿಯನ್ನು ಅಕೆಯ ಪಾಲಕರು ಬಿಟ್ಟು ಹೋಗಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಮೂಲ್ಯ ಶಿಶುಗೃಹದಲ್ಲಿ ಮಗುವಿಗೆ ರಕ್ಷಣೆ ನೀಡಲಾಗಿದೆ. ಬಾಲಕಿಯ ಪಾಲಕರು 4 ತಿಂಗಳೊಳಗೆ ಸಂಪರ್ಕಿಸಬೇಕು, ಇಲ್ಲವಾದರೆ ಕಾನೂನುರೀತ್ಯಾ ಮಗುವಿನ ಹಿತರಕ್ಷಣೆಗೆ ಕ್ರಮವಹಿಸಲಾಗುವುದು ಹೆಚ್ಚಿನ ವಿವರಗಳಿಗೆ 0836-2363389 ಸಂಪರ್ಕಿಸಬಹುದು ಎಂದು ಅಮೂಲ್ಯ ಶಿಶುಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಲ್ಕು ವರ್ಷದ ಮಗುವನ್ನ ಪಾಲಕರ ಸುಪರ್ಧಿಗೆ ಒಪ್ಪಿಸಲು ತಾವೂ ಕೂಡಾ ಸಹಾಯ ಮಾಡಬಹುದು. ಯಾವುದೇ ರೀತಿಯ ಮಾಹಿತಿ ಲಭಿಸಿದರೇ ಮೇಲೆ ತಿಳಿಸಿದ ನಂಬರಗೆ ಕಾಲ್ ಮಾಡಿ, ಸಹಕರಿಸಿ.


Spread the love

Leave a Reply

Your email address will not be published. Required fields are marked *