ಹುಬ್ಬಳ್ಳಿಯಲ್ಲಿ ಮನುಷ್ಯತ್ವ ಕಾಪಾಡುತ್ತಿರುವ “ಜೀವಧ್ವನಿ”- ಬಡವರ ಭರವಸೆ…

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ದಿಕ್ಕಿಲ್ಲದವರ ಬದುಕು ಹಸನಾಗಿಸಲು ಜೀವಧ್ವನಿ ಫೌಂಡೇಶನ್ ನಿರಂತರವಾಗಿ ಜನಪರ ಕಾರ್ಯಗಳನ್ನ ಹಮ್ಮಿಕೊಂಡು ಜನರಲ್ಲಿ ನೆಮ್ಮದಿ ಕಾಣತೊಡಗಿದೆ.
ನಿಖಿಲ್ ಹಂಜಗಿ ನೇತೃತ್ವದಲ್ಲಿ ರಾತ್ರಿವೇಳೆ ಕಷ್ಟಪಟ್ಟು ದುಡಿಯುವ ಹಮಾಲರಿಗೆ ಮತ್ತು ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್ ಸ್ವೇಟರ್ ನೀಡಿ, ಮಾನವೀಯತೆ ಮೆರೆದಿದ್ದಾರೆ.
ವೀಡಿಯೋ…
ತಂಪಾದ ಹವಾಮಾನದಿಂದ ರಕ್ಷಿಸುವ ಜೊತೆಗೆ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೀವ ಧ್ವನಿ ಫೌಂಡೇಶನ್ ಹಿಂದುಳಿದವರಿಗೆ ಸೇವೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತ್ತದೆ.
ಕಾರ್ಯಕರ್ತರಾದ ರಾಘವೇಂದ್ರ ಬಳ್ಳಾರಿ, ವಿಶ್ವನಾಥ್, ಗುರು ಉಂಕಿ ಎಲ್ಲರೂ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದಾರೆ.