Posts Slider

Karnataka Voice

Latest Kannada News

ಹುಬ್ಬಳ್ಳಿಯ ಶಿರಗುಪ್ಪಿ ಬಳಿ ಸರಣಿ ಅಪಘಾತ- ಓರ್ವನ ಸ್ಥಿತಿ ಗಂಭೀರ: ಮೂವರಿಗೆ ಗಾಯ

1 min read
Spread the love

ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಬಳಿ ಎದುರಿಗೆ ಬಂದ ಬೈಕ್ ಡಿಕ್ಕಿ ತಪ್ಪಿಸಲು ಹೋದ ಟ್ಯ್ರಾಕ್ಟರ್ ಕಾರಿಗೆ ಡಿಕ್ಕಿ ಹೊಡೆದು, ಮೂರು ವಾಹನಗಳು ಒದಕ್ಕೊಂದು ಡಿಕ್ಕಿ ಹೊಡೆದಿದ್ದು, ಸ್ಥಳೀಯ ಯುವಕನೋರ್ವನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಮೂವರಿಗೆ ಸಣ್ಣ ಪ್ರಮಾಣದ ಗಾಯಗಳಾದ ಘಟನೆ ಈಗಷ್ಟೇ ನಡೆದಿದೆ.

ಎಚ್.ಎಸ್.ಜಡಿಯವರ ಎಂಬುವವರಿಗೆ ಸೇರಿದ ಕಾರು ಟ್ಯ್ರಾಕ್ಟರಗೆ ಡಿಕ್ಕಿ ಹೊಡೆದು, ರಸ್ತೆಯ ಬದಿಯಲ್ಲಿ ಸಿಲುಕಿಕೊಂಡಿದ್ದು, ಏರ್ ಬ್ಯಾಗಗಳೆಲ್ಲ ಓಪನ್ ಆಗಿದ್ದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಬೈಕನಲ್ಲಿದ್ದ ವಿಜು ಎಂಬ ಯುವಕನಿಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಒಂದೇ ವೇಳೆಯಲ್ಲಿ ಎಲ್ಲ ವಾಹನಗಳು ಬಂದಿದ್ದು, ಒಂದನ್ನ ತಪ್ಪಿಸಲು ಒಂದು ಮುಂದಾಗಿ ಮೂರು ವಾಹನಗಳು ಇಂತಹ ಅವಘಡಗಳನ್ನ ಮಾಡಿಕೊಂಡಿದೆ. ಸ್ಥಳೀಯರು ವಾಹನದಲ್ಲಿದ್ದವರನ್ನ ಹೊರಗೆ ತೆಗೆದು ರಕ್ಷಣೆ ಮಾಡಿದ್ದು, ಸಂಚಾರ ಸುಗಮಗೊಳಿಸಲು ಪ್ರಯತ್ನ ಪಡುತ್ತಿದ್ದಾರೆ.

ಗ್ರಾಮೀಣ ಠಾಣೆಯ ಪೊಲೀಸರು ಈಗ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed