ಹೆಸರಿಗಷ್ಟೇ ಶಿಕ್ಷಕರ ಗ್ರಾಮೀಣ ಸಂಘ: ಇದ್ದವರೆಲ್ಲ ಶಹರದ ಶಿಕ್ಷಕರೇ..!
1 min readಹುಬ್ಬಳ್ಳಿ: ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಚುನಾವಣೆಗಳಲ್ಲಿ ಬಹುತೇಕವಾಗಿ ಹಲವು ಭಾಗದಲ್ಲಿ ಅವಿರೋಧವಾಗಿ ಆಯ್ಕೆಗಳು ನಡೆದಿವೆ. ಇಂತಹ ಸಮಯದಲ್ಲೂ ಗ್ರಾಮೀಣ ಶಿಕ್ಷಕರನ್ನ ಕಡೆಗಣಿಸಲಾಗಿರುವುದು ಬಹಿರಂಗಗೊಂಡಿದ್ದು, ಇದನ್ನ ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ತೀವ್ರವಾಗಿ ಖಂಡಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಶಿಕ್ಷಕರ ಸಂಘದಲ್ಲಿ ಗ್ರಾಮೀಣ ಶಿಕ್ಷಕರಿಗೆ ಕಡಿಮೆ ಅವಕಾಶ ನೀಡಲಾಗಿದೆ. ಹುಬ್ಬಳ್ಳಿ ಶಹರದಲ್ಲೇ ಇರುವ ಶಿಕ್ಷಕರಿಗೆ ಅವಕಾಶ ನೀಡಿ, ಗ್ರಾಮೀಣ ಭಾಗವನ್ನ ಸಂಪೂರ್ಣ ನಿರ್ಲಕ್ಯ ಮಾಡಲಾಗಿದೆ ಎಂದು ಸಜ್ಜನ ದೂರಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಶಿಕ್ಷಕರನ್ನ ಸಂಘದಿಂದ ದೂರವಿಟ್ಟು, ಗ್ರಾಮೀಣ ಸಂಘ ಎಂದು ಕರೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವ ಹೆಸರನ್ನ ಬಳಕೆ ಮಾಡಿಕೊಂಡಿರೋವರೋ ಅದೇ ಸ್ಥಳಗಳಲ್ಲಿ ಇರುವ ಶಿಕ್ಷಕರಿಗೆ ಅವಕಾಶ ನೀಡಬೇಕು. ಅದನ್ನ ಬಿಟ್ಟು ಗ್ರಾಮೀಣ ಶಾಲೆ ಶಿಕ್ಷಕರನ್ನ ಕೈ ಬಿಡುವುದು ಸಮಂಜಸವಲ್ಲ ಎಂದಿದ್ದಾರೆ.
ಶಿಕ್ಷಕರ ಸಂಘಗಳು ಶಿಕ್ಷಕರ ಪರವಾಗಿಯೂ ಇರಬೇಕು. ಶಹರ ಸಂಘದಲ್ಲಿ ಗ್ರಾಮೀಣ ಶಿಕ್ಷಕರನ್ನ ಸೇರಿಸಿ ಎಂದು ನಾವೂ ಕೇಳುವುದಿಲ್ಲ. ಗ್ರಾಮೀಣ ಸಂಘದಲ್ಲಿ ಕೇಳುವುದು ತಪ್ಪೇ. ಇದನ್ನ ಸಂಬಂಧಿಸಿದವರು ಅರಿತುಕೊಂಡು ನಡೆಯಬೇಕೆಂದು ಅಶೋಕ ಸಜ್ಜನ ಬೇಸರವ್ಯಕ್ತಪಪಡಿಸಿದ್ದಾರೆ.