ಶಿವನ ಸ್ಮರಣೆಯಲ್ಲಿ “ಉಳವಿಧೀಶ”ನ ಆಶೀರ್ವಾದ ಪಡೆದ ಅಮೃತ ದೇಸಾಯಿ ದಂಪತಿಗಳು- ಅಭೂತಪೂರ್ವ ಸ್ವಾಗತ ಕೋರಿದ ಅಭಿಮಾನಿಗಳು….

ಉತ್ತರಕನ್ನಡ: ಧಾರವಾಡ-71 ಮತಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಪಾದಯಾತ್ರೆಯ ಮೂಲಕ ಉಳವಿಗೆ ಆಗಮಿಸಿದಾಗ, ಅವರ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು.
ಡಿಸೆಂಬರ್ 12 ರಂದು ಸ್ವಗ್ರಾಮ ಹಂಗರಕಿಯಿಂದ ಆರಂಭಗೊಂಡಿದ್ದ ಪಾದಯಾತ್ರೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದ ಮಾಜಿ ಶಾಸಕ ಅಮೃತ ದೇಸಾಯಿ ಅವರಿಗೆ, ರಸ್ತೆಯುದ್ದಕ್ಕೂ ಜನರು ಹರ್ಷೋದ್ಘಾರದ ನಡುವೆ ಸ್ವಾಗತಿಸಿ, ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಅಭೂತಪೂರ್ವ ಸ್ವಾಗತದ ವೀಡಿಯೋ ಇಲ್ಲಿದೆ ನೋಡಿ…
ಉಳವಿ ಪ್ರವೇಶದ ಮುನ್ನವೇ ಡೊಳ್ಳು ಕುಣಿತ, ಜಗ್ಗಲಗಿ ಮೇಳದೊಂದಿಗೆ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಬಿಜೆಪಿಯ ಕಾರ್ಯಕರ್ತರು ‘ಧಣಿ’ ಕುಟುಂಬವನ್ನ ಅತ್ಯಾಪ್ತವಾಗಿ ಸ್ವಾಗತಿಸಿದರು.
ಮಾಜಿ ಶಾಸಕ ಅಮೃತ ದೇಸಾಯಿ ಅವರು ಕುಟುಂಬ ಸಮೇತ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಉಳವಿಧೀಶನ ಕೃಪೆಗೆ ಪಾತ್ರರಾದರು.