ಬೆಳೆವಿಮೆ “ಪರಿಹಾರ 50-50”- ಮುಂಗಾರು ಹೆಸರು.. ಹಿಂಗಾರಿಗೆ ಕಡಲೆ… ಶ್ರೀಮಂತ ರೈತರ ಅಸಲಿ ಕಹಾನಿ…!!!

ಧಾರವಾಡ: ಸಾವಿರಾರೂ ಬಡ ರೈತರಿಗೆ ಮೋಸ ಮಾಡಿ ಕೆಲ ಶ್ರೀಮಂತ ರೈತರು ಬೆಳೆವಿಮೆ ಪರಿಹಾರವನ್ನ ಫಿಪ್ಟಿ-ಫಿಪ್ಟಿ ಪಡೆಯಲು ಹೊಂಚು ಹಾಕಿರುವ ಪ್ರಕರಣವೀಗ ಜಿಲ್ಲಾಧಿಕಾರಿ ಕಚೇರಿ ಅಂಗಳಕ್ಕೆ ತೆರಳಿದ್ದು, ಹಿಂಗಾರಿ ಬೆಳೆಯ ವಿಮೆ ಪಡೆಯಲು ರೂಪಿಸಿರುವ ಸಂಚು ಬಯಲಾಗಿದೆ.
ಮುಂಗಾರು ಬೆಳೆಯ ಸಮಯದಲ್ಲಿ ಹೆಸರು ಬೆಳೆ ತೋರಿಸಿ, ವಿಮೆ ಹಣ ಜಮೆಯಾಗತ್ತೆ ಎಂದು ಬಕಪಕ್ಷಿಗಳಂತೆ ಕಾಯುತ್ತಿರುವ ನೀಚರೇ, ಹಿಂಗಾರಿನ ಬೆಳೆವಿಮೆ ಪಡೆಯಲು ಕಡಲೆ ಬೆಳೆಯನ್ನ ತೋರಿಸಿರುವುದು ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ ತಿಂಗಳ 30ರ ವರೆಗೆ ಕೊನೆಯ ದಿನಾಂಕವಾಗಿದ್ದ ಬೆಳೆವಿಮೆ ಭರಣ ಮಾಡುವ ಸಮಯದಲ್ಲಿ ತಾಂತ್ರಿಕ ದೋಷ ತೋರಿಸಿ, ಕೊನೆ ಕೊನೆಯ ಎರಡ್ಮೂರು ದಿನಗಳಲ್ಲಿ ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಶ್ರೀಮಂತ ರೈತರು ಬೆಳೆವಿಮೆ ತುಂಬಿರುವುದು ಮಾಹಿತಿಯಲ್ಲಿ ಹೊರ ಬಂದಿದೆ.
ಶ್ರೀಮಂತ ರೈತರೆನಿಸಿಕೊಂಡ ಮಾಜಿ ಶಾಸಕರ ಬೆಂಬಲಿಗರು ವಂಚನೆಗೆ ಸಾಥ್ ನೀಡಿದ್ದು, ಕೆಲವು ಭಾಗದಲ್ಲಿ ಇವರು ಹಣ ಹಾಕಿದ್ದಾರೆ. ಯಾವ ಯಾವ ಗ್ರಾಮ ಒನ್ ಕೇಂದ್ರದ ಮೂಲಕ ಹಣ ಬಂದಿದೆ ಎಂಬ ಲೆಕ್ಕಾಚಾರವನ್ನು ಕಲೆ ಹಾಕಲಾಗಿದೆ.
ಮತ್ತಷ್ಟು ಮಾಹಿತಿಯನ್ನ ನಿರೀಕ್ಷಿಸಿ..