ಡಾನ್ ಬಾಸ್ಕೋ ಸಂಸ್ಥೆಯ ಮಾನವೀಯತೆ: ವಿದ್ಯಾರ್ಥಿಗಳಿಗಾಗಿ ಕಿಟ್ ವಿತರಣೆ
1 min readಹುಬ್ಬಳ್ಳಿ: ಕೊರೋನಾ ಮಹಾಮಾರಿಯನ್ನ ತಡೆಗಟ್ಟಲು ಹಲವರು ಹಲವು ವಿಧದಲ್ಲಿ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಾನ್ ಬಾಸ್ಕೋ ಸಂಸ್ಥೆಯವರು ನಿರಂತರವಾಗಿ ತಮ್ಮ ಸೇವೆಯನ್ನ ಸಲ್ಲಿಸುತ್ತಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಡಾನ್ ಬಾಸ್ಕೋ ಸಂಸ್ಥೆಯು, ಮಕ್ಕಳ ಆರೋಗ್ಯ ಪಾಲನೆಗಾಗಿ ಪ್ಯಾಡ್, ಮಾಸ್ಕ, ಸ್ಯಾನಿಟೈಜರ ಸೋಪ (ಸ್ನಾನ ಹಾಗೂ ಬಟ್ಟೆ ತೊಳೆಯುವ) ನೀಡಿದರು. ಇದೇ ಸಂದರ್ಭದಲ್ಲಿ ಹೊಸದಾಗಿ ಹುಬ್ಬಳ್ಳಿ ತಾಲೂಕಿಗೆ ಆಗಮಿಸಿದ ದೈಹಿಕ ಶಿಕ್ಷಣ ಪರೀವೀಕ್ಷಕರಿಗೆ ಸನ್ಮಾನಿಸಲಾಯಿತು. ಎಸ್ ಡಿಎಮ್ ಸಿ ಅಧ್ಯಕ್ಷ ಸಿದ್ದಪ್ಪ ಕುಂಬಾರ ಅದ್ಯಕ್ಷತೆ ವಹಿಸಿದ್ದರು. ಡಾನ್ ಬಾಸ್ಕೋ ಸಂಸ್ಥೆಯ ಪ್ರಾಂಶುಪಾಲ ಪ್ಯಾಟ್ರಿಕ್ ಡಾಯಸ್, ಚರ್ಚ ಗುರುಗಳಾದ ಸಾಂತಾ ರೈಮೆಂಡ್ ಲೋಡಿಸ್, Plant Manager ಪಾತ್ರೋನ್ ಫರ್ನಾಂಡೀಸ್, ಸಮಾಜ ಸೇವಕಿ ಮೇರಿ ಸಾವಂತ ಉಪಸ್ಥಿತರಿದ್ದರು.
ಡಾನ್ ಬಾಸ್ಕೋ ಸಂಸ್ಥೆಯು ಸರಕಾರಿ ಶಾಲೆಯನ್ನ ಆಯ್ಕೆ ಮಾಡಿದ್ದು ಮತ್ತು ಇಲ್ಲಿನ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಲು ಮುಂದಾಗಿರುವುದನ್ನ ಶಾಲೆಯ ಎಸ್ ಡಿಎಂಸಿ ಶ್ಲಾಘಿಸಿದರು.