ಧಾರವಾಡದ ಸರಕಾರಿ ಕಚೇರಿ ಆವರಣದಲ್ಲಿ ನಡೀತು “ಹಾಡುಹಗಲೇ ಮಹಿಳೆ ಮೇಲೆ ಹಲ್ಲೆ”- ಗೊತ್ತೆಯಿಲ್ಲದಂತೆ ಕೂತ ‘ಮಹಾನುಭಾವ’….!!!! Big Exclusive

ಧಾರವಾಡ: ಸರಕಾರದ ಇಲಾಖೆಯೊಂದರ ಕಚೇರಿಯ ಆವರಣದಲ್ಲಿ ಮಹಿಳೆಯೊಬ್ಬರನ್ನ ಥಳಿಸಿದ ಪ್ರಕರಣವೊಂದು ಸದ್ದಿಲ್ಲದೇ ಮುಚ್ಚಿ ಹೋಗುತ್ತಿದ್ದದ್ದು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ಲಭಿಸಿದೆ.
ತನ್ನ ಕೆಲಸದ ನಿಮಿತ್ತ ಮಹಿಳಾ ವಕೀಲರೊಬ್ಬರು ಸರಕಾರಿ ಕಚೇರಿಗೆ ಬಂದ ಸಮಯದಲ್ಲಿ, ಪಾಲಿಕೆ ಸದಸ್ಯರೂ ಆಗಿರುವ ರಾಷ್ಟ್ರೀಯ ಪಕ್ಷವೊಂದರ ಪ್ರಮುಖ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಜೊತೆಗೆ ಬಂದವರು ಹಲ್ಲೆ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರಕಾರಿ ಕಚೇರಿ ಆವರಣದಲ್ಲಿ ಇಂತಹದೊಂದು ಘಟನೆ ನಡೆದರೂ, ತಮಗೇನು ಗೊತ್ತೆಯಿಲ್ಲ ಎಂಬಂತೆ ಮಹಾನುಭಾವ ಅಧಿಕಾರಿ ನಡೆದುಕೊಳ್ಳುತ್ತಿರುವುದು ತೀರಾ ಅಸಹ್ಯದ ಸಂಗತಿಯಾಗಿದೆ.
ಘಟನೆಯ ಸಂಪೂರ್ಣವಾದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಸಮೇತ ಕರ್ನಾಟಕವಾಯ್ಸ್.ಕಾಂ ಕೆಲವೇ ಸಮಯದಲ್ಲಿ ನಿಮ್ಮ ಮುಂದಿಡಲಿದೆ. ಹುಬ್ಬಳ್ಳಿ- ಧಾರವಾಡದ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ನೋಡಿ.