ಧಾರವಾಡ “DDPI ಕಚೇರಿ ಆವರಣ”ದಲ್ಲೇ “ಮಹಿಳಾ ವಕೀಲೆ ಮೇಲೆ ಹಲ್ಲೆ”- ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ‘ಮೊದಲ ಆರೋಪಿ’- Exclusive CCTV Video…

ಧಾರವಾಡ: ವಿಶ್ವ ಮಹಿಳಾ ದಿನಾಚರಣೆಯ ದಿನದಂದೇ ಮಹಿಳಾ ವಕೀಲರೊಬ್ವರ ಮೇಲೆ ಹಾಡುಹಗಲೇ ಸರಕಾರಿ ಕಚೇರಿ ಆವರಣದಲ್ಲಿ ಹಲ್ಲೆ ನಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಮುಖಂಡ ಪ್ರಕರಣದ ಮೊದಲ ಆರೋಪಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕೊಠಡಿಗೆ ಇಪ್ಪತ್ತು ಗಜದ ಅಂತರದಲ್ಲಿ ಘಟನೆ ನಡೆದಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿಯಲ್ಲಿ ಸ್ವರ್ಣಲತಾ ಅವರ ಮೇಲೆ ಹಲ್ಲೆ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮೋಹನ ಹಿರೇಮನಿ, ಸೋಮಪ್ಪ ಕಮ್ಮಾರ, ಲಕ್ಷ್ಮಣ ದೊಡ್ಡಮನಿ ಹಾಗೂ ಈತರರ ಮೇಲೆ ಪ್ರಕರಣ ದಾಖಲಾಗಿದೆ.
https://www.instagram.com/reel/DG7NhyBSYLa/?igsh=MXY0NWEyMmtiNHFudg==
ಪ್ರಕರಣ ತಮ್ಮದೇ ಆವರಣದಲ್ಲಿ ನಡೆದಿದ್ದರೂ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನ ಹೊರ ಹಾಕದೇ ಇರುವುದು, ಇಲ್ಲಿನ ವ್ಯವಸ್ಥೆಯನ್ನ ಬಿಂಬಿಸುತ್ತಿದೆ.