“ಧಾರವಾಡ ಪಾಲಿಕೆ” ಬೇರ್ಪಟ್ಟಿದ್ದಕ್ಕೆ “ಕ್ರೇಡಿಟ್” ತೆಗೆದುಕೊಳ್ಳುವವರು, ಊರತುಂಬ ಹದಗೆಟ್ಟಿರುವ ರಸ್ತೆಗಳ ‘ಕ್ರೇಡಿಟ್ಟೂ’ ತುಗೋತ್ತಾರಾ…!!??

ಧಾರವಾಡ: ಪ್ರಜ್ಞಾವಂತರ ಊರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ‘ಮಹಾನಗರ ಪಾಲಿಕೆ’ ಧಾರವಾಡಕ್ಕೆ ಬೇರೆಯಾದ ಮೇಲೆ ಅದಕ್ಕೆ ಕಾರಣ ತಾವೇ ಎಂದು ಬಿಂಬಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ಮುಂದುವರೆಸಿ, ಪ್ರಜ್ಞಾವಂತರ ಮುಂದೆ ನಗೆಪಾಟಿಲಿಗೆ ಈಡಾಗುತ್ತಿದ್ದಾರೆ.
ಹೌದು… ಧಾರವಾಡದ ಹಳೇ ಡಿಎಸ್ಪಿಯ ರಸ್ತೆ ಸರಿಸುಮಾರು ಎರಡು ವರ್ಷದಿಂದ ನಡೆಯುತ್ತಿದೆ, ಜನರ ಪರದಾಟ ದಿನವೂ ಮುಂದುವರೆದಿದೆ ಇದರ ಕ್ರೇಡಿಟ್ ಯಾವ ಪಾರ್ಟಿಯವರು ತೆಗೆದುಕೊಂಡು ಬ್ಯಾನರ್ ಹಾಕ್ತಾರೆಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ದಿನವೂ ಬಿಆರ್‌ಟಿಎಸ್ ಬಸ್‌ಗಳು ಒಂದಿಲ್ಲಾ ಒಂದು ರೀತಿಯಲ್ಲಿ ಜನರಿಗೆ ತೊಂದರೆ ಆಗುತ್ತಲೇ ಇದೆ. ತೇಜಸ್ವಿನಗರದ ಸೇತುವೆಯ ಸುತ್ತಮುತ್ತ ಅಪಘಾತಗಳು ಸಂಭವಿಸಿ, ಸಾವು ನೋವುಗಳು ನಡೆಯುತ್ತಲೇ ಇವೆ. ಇದರ ಕ್ರೇಡಿಟ್ ಯಾರು ತೆಗೆದುಕೊಳ್ಳುವುರೋ.
ಧಾರವಾಡ ನಗರಕ್ಕೆ ಬರುವ ಸಾವಿರಾರೂ ಜನರಿಗೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯಗಳು ಇಲ್ಕವೇ ಇಲ್ಲ. ಪ್ರಮುಖ ಪ್ರದೇಶಗಳಲ್ಲಿ ಅಗೆದಿರುವ ರಸ್ತೆಗಳಲ್ಲಿನ ಗುಂಡಿಗಳು ಹಾಗೇ ಉಳಿದು, ಹಲವರ ಪ್ರಾಣಕ್ಕೆ ಸಂಚಕಾರವೊಡ್ಡುವ ಸ್ಥಿತಿಯಿದೆ. ಇದನ್ನ ಯಾರೂ ಕ್ರೇಡಿಟ್ ತೆಗೆದುಕೊಂಡು ಬ್ಯಾನರ್ ಹಾಕ್ತೀರಿ ಎಂದು ಹುಬ್ಬೇರಿಸಿಕೊಂಡು ಜನ ಕಾಯ್ತಿದ್ದಾರೆ.