ಧಾರವಾಡ: ಅಪ್ಪನಿಗಾಗಿ ಮಂದಿರ ನಿರ್ಮಿಸಿ, ಕಂಚಿನ ಪ್ರತಿಮೆಯಿಟ್ಟ “ಪುಣ್ಯಾತ್ಮ ಸುಪುತ್ರ”…
1 min readಧಾರವಾಡ: ತನ್ನ ಅಪ್ಪ ಕಾಲವಾದ ಒಂದೇ ವರ್ಷದಲ್ಲಿ ತನ್ನಪ್ಪನ ಸಮಾಧಿಯನ್ನೇ ಮಂದಿರ ಮಾಡಿ, ಅದರಲ್ಲಿ ಅಪ್ಪನ ಕಂಚಿನ ಪ್ರತಿಮೆಯನ್ನ ಪ್ರತಿಷ್ಠಾಪಿಸಿ ಪುಣ್ಯಸ್ಮರಣೆ ಮಾಡಿದ ಅಪರೂಪದ ಘಟನೆ ಧಾರವಾಡದ ಬಳಿಯ ನುಗ್ಗಿಕೇರಿಯಲ್ಲಿ ನಡೆದಿದೆ.
95ವರ್ಷದ ದಿ.ಶಿವಪ್ಪ ಮಲಕಾರಿ ಅವರು ಕಳೆದ ವರ್ಷ ಶಿವೈಕ್ಯರಾಗಿದ್ದರು. ಅವರ ಸ್ಮರಣೆಯನ್ನ ಹಿರಿಯ ಪುತ್ರ ಉದ್ಯಮಿ ಹೊನ್ನಪ್ಪ ಮಲಕಾರಿ ಹಾಗೂ ಕಿರಿಯ ಪುತ್ರ ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ ಅವರು ಮಂದಿರ ನಿರ್ಮಿಸುವ ಮೂಲಕ ಮಾಡಿದ್ದಾರೆ.
ವೀಡಿಯೋ…
ಕಲಿಯುಗ ಎಂಬ ಮಾಯೆಯಲ್ಲಿ ಸಂಬಂಧಗಳೇ ಕಳೆದು ಹೋಗಿ ಅಪ್ಪನನ್ನ ಮರೆಯುವ ಕಾಲದಲ್ಲಿ ಬಸವರಾಜ ಮಲಕಾರಿ ಅವರಂಥ ಆದರ್ಶ ಪುತ್ರನಾಗಿದ್ದು, ಸೋಜಿಗವಾದರೂ ಸತ್ಯವಾಗಿದೆ.