ನಾಪತ್ತೆಯಾದ ಯುವಕ ಅಣ್ಣಿಗೇರಿ ಬಸಾಪುರ ಕಾಲುವೆಯಲ್ಲಿ ಪತ್ತೆ
1 min readಧಾರವಾಡ: ಕಾಲುವೆಯಲ್ಲಿ ಈಜಲು ಹೋದ ಯುವಕನೋರ್ವ ನಾಪತ್ತೆಯಾದ 24 ಗಂಟೆಯ ನಂತರ ಬಸಾಪುರದ ಕಾಲುವೆ ಗೇಟ್ ಬಳಿಯೇ ದೊರಕಿದ ಘಟನೆ ನಡೆದಿದೆ.
ಬಸಾಪುರ ಗ್ರಾಮದ ಆದಿವಾಸಿನಗರದ ಭರತ ಹರಣಶಿಕಾರಿ ಎಂಬ ಯುವಕನೇ ನಿನ್ನೆ ಮಲಪ್ರಭಾ ಕಾಲುವೆಯಲ್ಲಿ ಈಜಲು ಹೋಗಿದ್ದ. ಕೆಲವು ಸಮಯದ ನಂತರವೂ ಆತ ಮೇಲೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದರು. ಸ್ಥಳೀಯರಿಗೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದರು.
ಅಣ್ಣಿಗೇರಿ ಪಿಎಸೈ ಜೂಲಕಟ್ಟಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದು, ಈಗ ಬಸಾಪುರ ಕಾಲುವೆ ಗೇಟಿನಲ್ಲೇ ಮೃತ ಭರತನ ಶವ ದೊರಕಿದೆ.
ನಿನ್ನೆಯಿಂದಲೂ ಬಸಾಪುರ ಗ್ರಾಮಸ್ಥರು ಹಾಗೂ ಭರತನ ಸಂಬಂಧಿಗಳು ಆತನಿಗಾಗಿ ಹುಡುಕಾಟ ನಡೆಸಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾಥ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.