ಡಿಸಿಎಂ ಅವರೇ ಲೇಟ್ ಫೀ ತುಗೋತ್ತಿದ್ದಾರಂತೆ.. ಹೀಗೆ ಮಾಡೋದು ಸರಿನಾ..!
1 min readಧಾರವಾಡ: ಕೊರೋನಾ ಮಹಾಮಾರಿಯ ತಾಂಡವ ನೃತ್ಯ ಮುಂದುವರೆದಿದ್ದು, ಬಡವರು ಬದುಕುವುದೇ ಕಷ್ಟ ಎನ್ನುತ್ತಿರುವಾಗ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಲೇಟ್ ಫೀ ಎಂದು ಹಣವನ್ನ ಪೀಕುತ್ತಿವೆ. ಇದು ನ್ಯಾಯವಾ.. ಬಡವರ ಮೇಲೆ ಇದೊಂದು ಹೊರೆಯಾಗುತ್ತೆ ಎನ್ನುವುದು ತಮಗೆ ತಿಳಿಯದಾ ಎಂದು ವಿದ್ಯಾರ್ಥಿಗಳ ಪಾಲಕರು ಡಿಸಿಎಂ ಅಶ್ವತ್ಥ ನಾರಾಯಣ ಅವರನ್ನ ಕೇಳುತ್ತಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಲೇಟ್ ಫೀ ಎಂದು ವಿದ್ಯಾರ್ಥಿಗಳಿಂದ 4240 ರೂಪಾಯಿಗಳನ್ನ ಪಡೆಯಲಾಗುತ್ತಿದೆ. ಬಿಎ, ಬಿಸ್ಸಿ ಹಾಗೂ ಬಿಕಾಂ ಪದವಿಗಳಿಗೆ ಲೇಟ್ ಫೀ ಎಂದು ಹಣವನ್ನ ಪಡೆಯಲಾಗುತ್ತಿದೆ. ಕೊರೋನಾ ಸಮಯದಲ್ಲಿ ಶಿಕ್ಷಣ ಕೊಡಿಸುವುದೇ ದುಸ್ತರವಾಗುತ್ತಿರುವ ಈ ವೇಳೆಯಲ್ಲಿ ಇಂತಹ ಫೀಗಳನ್ನ ಆಕರ ಮಾಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನ ತಾವೂ ಅರ್ಥ ಮಾಡಿಕೊಳ್ಳಬೇಕೆಂದು ಪಾಲಕರು ಕೇಳಿಕೊಂಡಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ ಅವರು ಈ ಬಗ್ಗೆ ಗಮನಹರಿಸಬೇಕಿದೆ. ಬಡವರಿಗೆ ಕೊರೋನಾ ಕೊಟ್ಟಿರುವ ಸಂಕಟ ಏನು ಎಂಬುದು ತಮಗೆ ತಿಳಿದೇ ಇದೆ. ಹಾಗಾಗಿ ಇಂತಹ ಸಮಯದಲ್ಲಿ ಈ ಕ್ರಮವನ್ನ ಸಂಪೂರ್ಣವಾಗಿ ಕೈ ಬಿಟ್ಟು ಬಡವರ ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಮಾಡಬೇಕಿದೆ.